Join The Telegram | Join The WhatsApp |
ಬೆಳಗಾವಿ :
ಬಳ್ಳಾರಿಯಲ್ಲಿ ಜರುಗಿದ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ ಪಿಯು ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಸಮೃದ್ಧಿ ಕುಡಚಿ, ತನ್ವಿ ಗಾವಡೆ, ಧನಶ್ರೀ ಕದಂ ಮತ್ತು ಸಯಾಲಿ ದೇಸಾಯಿ ಅವರು ಫುಟ್‌ಬಾಲ್‌ನಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಆ ಮೂಲಕ ಅವರು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಅತ್ಯುತ್ತಮ ಗೋಲ್ ಕೀಪರ್ ಆಗಿ ಸಮೃದ್ಧಿ ಕುಡಚಿ ಆಯ್ಕೆಯಾಗಿದ್ದಾರೆ. ಅವರ ಗಮನಾರ್ಹ ಸಾಧನೆಗಾಗಿ ಕೆಎಲ್‌ಇ ಆಡಳಿತ ಮಂಡಳಿ ನಿರ್ದೇಶಕರಾದ ವಾಯ್.ಎಸ್.ಪಾಟೀಲ, ಬಿ.ಆರ್.ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಎಂ.ಸಿ.ಕೊಳ್ಳಿ, ಡಾ.ಎಂ.ಟಿ.ಕಾಂಬಳೆ, ಪಿಯು ಪ್ರಾಂಶುಪಾಲೆ ಪ್ರೊ.ಗಿರಿಜಾ ಹಿರೇಮಠ, ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ನಿರ್ದೇಶಕ ಡಾ.ಸಿ.ರಾಮರಾವ್ ಅಭಿನಂದಿಸಿದ್ದಾರೆ.
Join The Telegram | Join The WhatsApp |