Join The Telegram | Join The WhatsApp |
ಗದಗ:
ನಗರದ ಕೆ.ಎಲ್.ಇ. ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ 75 ನೇ ವರ್ಷದ ಅಮೃತ ಮಹೋತ್ಸವ ನಿಮಿತ್ತ ಪ್ರತಿಷ್ಠಿತ ಜೆ.ಟಿ. ಕಾಲೇಜು ಆವರಣದಲ್ಲಿ ಜ. 20-21 ರಂದು ಎರಡು ದಿನಗಳವರೆಗೆ ಕೆ.ಎಲ್.ಇ. ಅಂಗ ಸಂಸ್ಥೆಗಳ ನಡುವೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಬಹಳ ಮುಖ್ಯವಾಗಿ ಸಾಂಸ್ಕೃತಿಕ ವಿಭಾಗದಲ್ಲಿ ಸಮೂಹ ಜನಪದ ನೃತ್ಯ, ಬೀದಿನಾಟಕ, ಸಮೂಹ ಗಾಯನ, ಆಶುಭಾಷಣ, ಚರ್ಚಾ, ರಸಪ್ರಶ್ನೆ, ಕವನ ವಾಚನ, ಪೇಯಿಂಟಿಂಗ್, ಪೋಟೋಗ್ರಫಿ, ಕ್ಲೇಮಾಡಲಿಂಗ್, ಕ್ರೀಡಾ ವಿಭಾಗದಲ್ಲಿ ಕಬಡ್ಡಿ, ಕ್ರಿಕೇಟ್, ವಾಲಿಬಾಲ್, ಥ್ರೋಬಾಲ್, ಅಥ್ಲೆಟಿಕ್ ಖೋ ಖೋ, ಒಳಾಂಗಣ ಕ್ರೀಡೆಗಳನ್ನು ವಿದ್ಯಾರ್ಥಿಗಳು ಮತ್ತ ಬೋಧಕ ಮತ್ತು ಬೋಧಕೇತರ ವರ್ಗಕ್ಕೆ ಆಯೋಜಿಸಲಾಗಿದ್ದು, ಈ ಸ್ಪರ್ಧೆಗಳಲ್ಲಿ ಗದಗನ ಕೆ.ಎಲ್.ಇ. ಜೆ.ಟಿ. ಮಹಾವಿದ್ಯಾಲಯ, ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ, ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಜೆ.ಟಿ. ಪದವಿ ಪೂರ್ವ ಮಹಾವಿದ್ಯಾಲಯ, ಔಷಧ ಮಹಾವಿದ್ಯಾಲಯ, ಬಿ.ಬಿ.ಎ ಮತ್ತು ಬಿ.ಸಿ.ಎ. ಕಾಲೇಜು, ಕೆ.ಎಲ್.ಇ. ಪದವಿ ಪೂರ್ವ ಕಾಲೇಜು, ಕುಕನೂರು, ಪದವಿ ಮತ್ತು ಪದವಿ ಪೂರ್ವ ಕಾಲೇಜು, ಸಂಶಿ ಸೇರಿದಂತೆ 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಜಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join The Telegram | Join The WhatsApp |