ಬೆಳಗಾವಿ : ನರೇಗಾ ಕಾಮಗಾರಿಯ ತಾಂತ್ರಿಕ ಅನುಮೋದನೆ ನೀಡಲು ಗ್ರಾಪಂ ಪಂಚಾಯತ ಸದಸ್ಯರಿಂದ 27.75 ಲಕ್ಷ ಲಂಚ ಪಡೆಯುತ್ತಿದ್ದ ಲಂಚಬಾಗ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಬಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾನಾಪುರದ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ದುರದುಂಡೇಶ್ವರ ಬನ್ನೂರ ಈತ ಗ್ರಾಮ ಪಂಚಾಯತ ಸದಸ್ಯರೊಬ್ಬರಿಂದ ನರೇಗಾ ಕಾಮಗಾರಿಯ ತಾಂತ್ರಿಕ ಅನುಮೋಧನೆ ನೀಡಲು 27.75 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ ಈ ಕುರಿತು ಸದಸ್ಯರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳು ಬನ್ನೂರು ಅವರು ವಾಸ ಇರುವ ಯಳ್ಳೂರು ಗ್ರಾಮದ ಮನೆಯ ಮೇಲೆ ದಾಳಿ ಮಾಡಿ ಮನೆಯಲ್ಲಿ ಲಂಚ ಪಡೆಯುತ್ತಿದ್ದಾ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ 27.75 ಲಕ್ಷ ನಗದು ಹಣ ಹಾಗೂ ಕೆಲ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ ಪಿ ಹನಮಂತರಾಯ್ ಅವರ
ಮಾರ್ಗದರ್ಶನದಲ್ಲಿ ಶ್ರೀಮತಿ. ಪುಷ್ಪಲತಾ, ಡಿಎಸ್, ನಿರಂಜನ್ ಎಂ. ಪಾಟೀಲ, ಪಿಐ.
ಸಿಬ್ಬಂದಿಗಳಾದ ರವಿ ಮಾವರಕರ, ಶ್ರೀಮತಿ, ರಾಜಶ್ರೀ ಭೋಸಲೆ, ಅಭಿಜಿತ ಜಮಖಂಡಿ ಮತ್ತು ಎನ್.ಎಂ.ಮಠದ ತಂಡದವರಿಂದ ಈ ದಾಳಿ ಕೈಗೊಳ್ಳಲಾಗಿರುತ್ತದೆ.