ಬೆಳಗಾವಿ : ಲಂಡನ್ ಪ್ರವಾಸದಲ್ಲಿರುವ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಲ್ಯಾಂಬೆತ್ ನಗರದಲ್ಲಿ ನಿರ್ಮಾಣಗೊಂಡಿರುವ ಜಗಜ್ಯೋತಿ ಬಸವೇಶ್ವರರ ಮೂರ್ತಿಗೆ ಗೌರವ ನಮನ ಸಲ್ಲಿಸಿದರು.

ಬಸವೇಶ್ವರರ ಮೂರ್ತಿ ಸ್ಥಾಪಿಸಿರುವ ಲಂಡನ್ ಮಾಜಿ ಮೇಯರ್, ಕಲಬುರ್ಗಿ ಮೂಲದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ಈ ಸಂದರ್ಭದಲ್ಲಿ ಮೃಣಾಲ್ ಹಾಗೂ ಡಾ.ಹಿತಾ ದಂಪತಿಯನ್ನು ಸನ್ಮಾನಿಸಿದರು.

ಈ ವೇಳೆ ಅನೇಕ ಕನ್ನಡಿಗರು ಉಪಸ್ಥಿತರಿದ್ದರು.