ಹೊಸನಗರ: ಹುಲಿಕಲ್ ಹೆದ್ದಾರಿ ಬಳಿ ಟೆನ್ ವ್ಹೀಲ್ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ‌ ನದಿಯಲ್ಲಿ ಬಿದ್ದು (ವಾರಾಹಿ ಪಿಕಪ್ ಡ್ಯಾಂ ಹಿನ್ನೀರು) ನೀರಿನಲ್ಲಿ ಮುಳುಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ತೀರ್ಥಹಳ್ಳಿ-ಮಾಸ್ತಿಕಟ್ಟೆ ಮಾರ್ಗವಾಗಿ ಜೋಳ ತುಂಬಿಕೊಂಡು ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ನದಿಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.