Join The Telegram | Join The WhatsApp |
ನವದೆಹಲಿ-
ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) LPG ಸಿಲಿಂಡರ್ ಬೆಲೆಯನ್ನು ಹೆಚ್ಚಿಸುವ ಮೂಲಕ 2023 ರ ಹೊಸ ವರ್ಷದ ಮೊದಲ ದಿನದಂದು ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿವೆ. ಆದಾಗ್ಯೂ, ಗೃಹಬಳಕೆಯ ಸಿಲಿಂಡರ್‌ಗಳ ದರಗಳನ್ನು ಬದಲಾಯಿಸಲಾಗಿಲ್ಲ.
ಕಳೆದ ವರ್ಷ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಒಟ್ಟು 153.5 ರೂ. ಏರಿಕೆಯಾಗಿತ್ತು. ಈ ವರ್ಷದ ಮೊದಲ ದಿನವೇ 25 ರೂ. ದರ ಹೆಚ್ಚಳ ಮಾಡಲಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಗಳು ಏರಿಕೆಯಾದ ಹಿನ್ನಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಹಾರ ಪದಾರ್ಥಗಳ ಬೆಲೆಗಳು ಏರಿಕೆಯಾಗುವ ನಿರೀಕ್ಷೆ ಇದೆ.
ಮಹಾನಗರ ಗಳ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ-
ದೆಹಲಿ – ರೂ 1768 / ಸಿಲಿಂಡರ್
ಮುಂಬೈ – ರೂ 1721/ ಸಿಲಿಂಡರ್
ಕೋಲ್ಕತ್ತಾ – ರೂ 1870/ ಸಿಲಿಂಡರ್
ಚೆನ್ನೈ – ರೂ 1917/ ಸಿಲಿಂಡರ್
Join The Telegram | Join The WhatsApp |