Join The Telegram | Join The WhatsApp |
ನವದೆಹಲಿ-
ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ), ಕೊಳವೆ ಮೂಲಕ ಸರಬರಾಜಾಗುವ ಅಡುಗೆ ಅನಿಲ (ಪಿಎನ್ಜಿ), ಸಾಂದ್ರೀಕೃತ ಅನಿಲ (ಸಿಎನ್ಜಿ) ದರ ಪರಿಷ್ಕರಣೆಯಾಗುವ ಸಂಭವ ಇದೆ.ನವೆಂಬರ್ನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ತಗ್ಗಿತ್ತು. ಆದರೆ, ಗೃಹ ಬಳಕೆಯ ಎಲ್‌ಪಿಜಿ ಬೆಲೆ ಇಳಿಸಿರಲಿಲ್ಲ. ಈ ತಿಂಗಳು ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ ಮಾಹೆಯ ಹಣದುಬ್ಬರ ತಗ್ಗಿರುವುದರಿಂದ ಪಿಎನ್ಜಿ, ಸಿಎನ್ಜಿ ದರಗಳು ತಗ್ಗುವ ಸಂಭವ ಇದೆ.
ಕಳೆದ ಬಾರಿ ಅಕ್ಟೋಬರ್ 6 ರಂದು 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬದಲಾಯಿಸಲಾಗಿತ್ತು. ಅಕ್ಟೋಬರ್‌ನಲ್ಲಿ ದೇಶೀಯ ಎಲ್‌ಪಿಜಿ ಬೆಲೆಯನ್ನು 15 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಹಿಂದೆ ಮಾರ್ಚ್ 22 ರಂದು 50 ರೂ. ಇಳಿಕೆಯಾಗಿತ್ತು.
Join The Telegram | Join The WhatsApp |