
ಲಕ್ನೋ : ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ಆಡಿದ್ದ ಲೆಗ್-ಸ್ಪಿನ್ನರ್ ದಿಗ್ವೇಶ ರಾಥಿ, ಅಪರೂಪದ ಬೌಲಿಂಗ್ ಸಾಧನೆಗಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, 24 ವರ್ಷದ ಆಟಗಾರ ಸ್ಥಳೀಯ ಟಿ20 ಲೀಗ್ ಪಂದ್ಯವೊಂದರಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.
ಈ ವೀಡಿಯೊ ಕ್ಲಿಪ್ ಅನ್ನು ದಿಗ್ವೇಶ ರಾಥಿ ಅವರ ಐಪಿಎಲ್ ಫ್ರಾಂಚೈಸಿ ಎಲ್‌ಎಸ್‌ಜಿ ಕೂಡ ಹಂಚಿಕೊಂಡಿದೆ. ಈ ಪಂದ್ಯದಲ್ಲಿ ಅವರು ಕೇವಲ 5 ಎಸೆತಗಳಲ್ಲಿ ಅರ್ಧದಷ್ಟು ತಂಡವನ್ನು ಪೆವಿಲಿಯನ್‌ಗೆ ಕಳುಹಿಸಿದ್ದು, ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ರಾಥಿ ಇತ್ತೀಚಿನ ಐಪಿಎಲ್ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು, ಅವರ ಬೌಲಿಂಗ್‌ಗೆ ಮಾತ್ರವಲ್ಲದೆ ಅವರ ಆಕ್ರಮಣಕಾರಿ “ಸಂಭ್ರಮಾಚರಣೆ” ಸಹ ಗಮನ ಸೆಳೆಯಿತು ಮತ್ತು ಅವರಿಗೆ ದಂಡ ವಿಧಿಸಲೂ ಕಾರಣವಾಗಿತ್ತು.
ದೆಹಲಿಯಲ್ಲಿ ಜನಿಸಿದ ಲೆಗ್ ಸ್ಪಿನ್ನರ್ ದಿಗ್ವೇಶ ರಾಥಿ ಐಪಿಎಅಲ್ 2025ರ ಐಪಿಎಲ್ ಋತುವಿನಲ್ಲಿ 13 ಪಂದ್ಯಗಳಲ್ಲಿ 30.64 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ಅವರ ಪ್ರಯತ್ನಗಳ ಹೊರತಾಗಿಯೂ, ಎಲ್‌ಎಸ್‌ಜಿ ಸತತ ಎರಡನೇ ವರ್ಷ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಐಪಿಎಲ್ ನಂತರದ ದಿಗ್ವೇಶ ರಾಥಿ ತನ್ನ ಸಾಧನೆಯ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ, ಸ್ಥಳೀಯ ಸರ್ಕ್ಯೂಟ್‌ಗಳಲ್ಲಿ ಅವರ ಪ್ರದರ್ಶನವು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಥವಾ ಫ್ರಾಂಚೈಸ್ ಮಟ್ಟದ ಬುಲಾವ್‌ಗಳಿಗೆ ದಾರಿ ಮಾಡಿಕೊಡುತ್ತದೆಯೇ ಎಂದು ನೋಡಬೇಕಾಗಿದೆ.