ಮಡಾಮಕ್ಕಿ : ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಡಾಮಕ್ಕಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಮಂಜರು ಮಾಂಡಿ
ಇಂದು ನಿಧನರಾಗಿದ್ದಾರೆ.
ಸುತ್ತಮುತ್ತಲಿನ ಊರುಗಳಲ್ಲಿ ಅತ್ಯಂತ ಚಿರಪರಿಚಿತರಾಗಿದ್ದ ಕೃಷ್ಣಮೂರ್ತಿ ಮಂಜರು ಮಡಾಮಕ್ಕಿ ಶ್ರೀ ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಗುರುತಿಸಿಕೊಂಡಿದ್ದರು. ಅತ್ಯಂತ ಪ್ರಾಚೀನ ಹಾಗೂ ಪುರಾಣ ಪ್ರಸಿದ್ಧ ಮಡಾಮಕ್ಕಿ ದೇವಸ್ಥಾನದ ಅಭಿವೃದ್ಧಿಗೆ ತೊಡಗಿದ್ದ ಕೃಷ್ಣಮೂರ್ತಿ ಮಂಜರು ಸದಾ ಕ್ಷೇತ್ರದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅವರ ನಿಧನಕ್ಕೆ ಅಪಾರ ಭಕ್ತ ವರ್ಗ ಶೋಕ ವ್ಯಕ್ತಪಡಿಸಿದೆ.