ಮುಂಬೈ: 2024ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮಧ್ಯಪ್ರದೇಶದ 19 ವರ್ಷದ ನಿಕಿತಾ ಪೋರ್ವಾಲ್ ಅವರು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್ ಇಂಡಿಯಾ-2023ರ ವಿಜೇತೆ ನಂದಿನಿ ಗುಪ್ತಾ ಅವರು ನಿಕಿತಾ ಅವರಿಗೆ ಕಿರೀಟ ತೊಡಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತ್ತಿಯಲ್ಲಿ ನಿಕಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿಯ ರೇಖಾ ಪಾಂಡೆ ಮತ್ತು ಗುಜರಾತ್‌ನ ಆಯುಷಿ ಧೋಲಾಕಿಯಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಸ್ಪರ್ಧಿ ಸಂಗೀತಾ ಬಿಜ್ಞಾನಿ, ನಿಕಿತಾ ಮಹೈಸಲ್ಕರ್, ಅನೀಸ್ ಬಾಜ್, ನೇಹಾ ಧೂಪಿಯಾ, ಬಾಸ್ಕೋ ಮಾರ್ಟಿಸ್ ಮತ್ತು ಮಧುರ್ ಭಂಡಾರ್ಕರ್ ಇದ್ದರು.
ಮಿಸ್ ಇಂಡಿಯಾ 2024ರ ಅಂತಿಮ ಸುತ್ತಿನ ಸ್ಪರ್ಧೆಯು ಮುಂಬೈನಲ್ಲಿ ನಡೆದಿದೆ.