ಪ್ರಯಾಗರಾಜ್ : ಉತ್ತರ ಪ್ರದೇಶದ ಪ್ರಯಾಗರಾಜದ ಸಂಗಮದ ಮಹಾ ಕುಂಭ 2025 ಸೋಮವಾರದಿಂದ ಆರಂಭವಾಗಿದೆ. ಇಲ್ಲಿ ಸೇರುವ ಸಂತರು ಮತ್ತು ಭಕ್ತ ಸಾಗರದ ನಡುವೆ, ಅತೀಂದ್ರಿಯ ಮತ್ತು ತಪಸ್ವಿಗಳ ಒಂದು ಅನನ್ಯ ಸಮೂಹ ಇದೆ, ಅವರ ನಿಗೂಢ ನೋಟ ಮತ್ತು ಅಸಾಧಾರಣ ಆಚರಣೆಗಳು ಅವರನ್ನು ಧಾರ್ಮಿಕ ಉತ್ಸವದಲ್ಲಿ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ. ಅಂಥವರಲ್ಲಿ ರುದ್ರಾಕ್ಷ ಬಾಬಾ ಅವರು ಒಬ್ಬರು.
ಮಹಾ ಕುಂಭದಲ್ಲಿ, ಸನ್ಯಾಸಿ ಗೀತಾನಂದ ಮಹಾರಾಜ್ ಅವರು ‘ರುದ್ರಾಕ್ಷ ಬಾಬಾ’ ಎಂದೇ ಜನಮಾನಸದಲ್ಲಿ ಪ್ರಖ್ಯಾತರಾಗಿದ್ದಾರೆ. ಅವರು ಕಳೆದ ಆರು ವರ್ಷಗಳಿಂದ 45 ಕಿಲೋಗ್ರಾಂ ತೂಕದ 1.25 ಲಕ್ಷ ರುದ್ರಾಕ್ಷಿಗಳನ್ನು ತಲೆಯ ಮೇಲೆ ಧರಿಸುತ್ತಿದ್ದಾರೆ. ಈ ಪವಿತ್ರ ಮಣಿಗಳನ್ನು ಅವರ ಭಕ್ತರು ಅವರಿಗೆ ಉಡುಗೊರೆಯಾಗಿ ನೀಡಿದ್ದಗಿದೆ. ಅವರು ಸುಮಾರು 6 ವರ್ಷಗಳಿಂದ ಇಷ್ಟೊಂದು ಭಾರದ ರದ್ರಾಕ್ಷಿ ಸರವನ್ನುತಲೆಯ ಮೇಲೆ ಹೊತ್ತಿದ್ದಾರೆ ಮತ್ತು ಅದರ ಮೂಲಕ ಅವರು ತಮ್ಮ ತಪಸ್ಸು ಮತ್ತು ಸಾಧನೆ ಮಾಡುತ್ತಾರೆ. ಇದು ಅವರ ನಂಬಿಕೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ. ಬಾಬಾ ಅವರು ಜುನಾ ಅಖಾರಾದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಪಂಜಾಬಿನ ಕೋಟ್ ಕಾ ಪುರ್ವಾ ಗ್ರಾಮದವರು.
ಗೀತಾನಂದರ ಪ್ರಯಾಣವು ಆಧ್ಯಾತ್ಮಿಕ ಭಕ್ತಿಯಲ್ಲಿ ಮುಳುಗಿದೆ. ತಂದೆ-ತಾಯಿಗಳಿಗೆ ಮೂರು ಮಕ್ಕಳಲ್ಲಿ ಎರಡನೆಯವನಾಗಿ ಜನಿಸಿದ ಅವರು ತಂದೆ ತಾಯಿಯ ಗುರುಗಳ ಆಶೀರ್ವಾದ ಪಡೆದ ನಂತರ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಗುರುಗಳಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಅವರನ್ನು ಹರಿದ್ವಾರಕ್ಕೆ ಕರೆತರಲಾಯಿತು, ಅಲ್ಲಿ ಅವರು ಸಂಸ್ಕೃತವನ್ನು ಅಧ್ಯಯನ ಮಾಡಿದರು ಮತ್ತು 12-13 ನೇ ವಯಸ್ಸಿನಲ್ಲಿ ಸನ್ಯಾಸಿತ್ವವನ್ನು ಸ್ವೀಕರಿಸಿದರು.
ಅವರ ಕಠಿಣ ಅಭ್ಯಾಸಗಳಿಗೆ ಹೆಸರುವಾಸಿಯಾದ ರುದ್ರಾಕ್ಷ ಬಾಬಾ ಅವರು ಚಳಿಗಾಲದಲ್ಲಿ 1,001 ಮಡಕೆಗಳಿಂದ ಅತ್ಯಂತ ತಣ್ಣಗಾದ ನೀರಿನಿಂದ ಸ್ನಾನ ಮಾಡುತ್ತಾರೆ ಮತ್ತು ಬೇಸಿಗೆಯಲ್ಲಿ ಧುನಿ ಆಚರಣೆಗಳನ್ನು ಮಾಡಿದ್ದಾರೆ.