ಅಥಣಿ : ವಿಮೋಚನಾ ಸಂಘದ ವತಿಯಿಂದ ನೀಡುವ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಸಾಧಕರಿಗೆ ನೀಡುವ ಮಹಾಂತ ಮಂದಾರ ಪ್ರಶಸ್ತಿ-2024 ನ್ನು ಖ್ಯಾತ ನ್ಯಾಯವಾದಿ ಕೆ.ಎ.ವನಜೋಳ ಅವರಿಗೆ ಪ್ರದಾನ ಮಾಡಲಾಯಿತು.

ನ್ಯಾಯವಾದಿ ಕೆ.ಎ. ವನಜೋಳ ಅವರು 1995 ರಿಂದ ವಕೀಲ ವೃತ್ತಿಯಲ್ಲಿ ತೊಡಗಿದ್ದು, ಅಥಣಿ ಭಾಗದಲ್ಲಿನ ಹಲವು ಬಡ ಜನರಿಗೆ ಸಹಾಯ ಮಾಡಿದ್ದು, ಇವರು ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರಕ್ಕೆ, ಅನೇಕ ವೃದ್ಧಾಶ್ರಮಗಳಿಗೆ, ಸಹಾಯ ಹಸ್ತ ಚಾಚಿದ್ದು ಯಾರೇ ಸಹಾಯವೆಂದು ಬಂದರೆ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಗಳಿಲ್ಲ. ಅಥಣಿ ಭಾಗದಲ್ಲಿ ದಾನ ನೀಡುವುದರಲ್ಲಿ ನ್ಯಾಯವಾದಿ ಕೆ.ಎ.ವನಜೋಳ ಅವರದ್ದು ಎತ್ತಿದ ಕೈ. ಇವರ ಈ ಸಾಮಾಜಿಕ ಸಾಧನೆಗೆ ಪ್ರಶಸ್ತಿ ಒಲಿದು ಬಂದಿದೆ.