Join The Telegram | Join The WhatsApp |
ವಿಜಯಪುರ:
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದ ಮಧ್ಯೆ ಈಗ ಕರ್ನಾಟಕ ಸೇರಲು ನಿರ್ಧಾರ ಮಾಡಿರುವ ಮಹಾರಾಷ್ಟ್ರದ ಗ್ರಾಮಕ್ಕೆ ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಕನ್ನಡಿಗರಿಗೆ ನೀವು ಕರ್ನಾಟಕಕ್ಕೆ ಸೇರುತ್ತೇವೆ ಎಂದರೆ ನಾವು ನಿಮ್ಮ ಗ್ರಾಮ ಪಂಚಾಯತವನ್ನೇ ವಿಸರ್ಜಿಸುತ್ತೇವೆ ಎಂದು ಮಹಾರಾಷ್ಟ್ರ ಸರ್ಕಾರ ಬೆದರಿಕೆ ಹಾಕಿದೆ.
ಕರ್ನಾಟಕ ಸೇರಲು ಇಚ್ಛೆ ವ್ಯಕ್ತ ಪಡಿಸಿದ್ದ ಅಕ್ಕಲಕೋಟ ತಾಲೂಕಿನ 11 ಗ್ರಾಮ ಪಂಚಾಯತಗಳನ್ನು ವಿಸರ್ಜನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಆದರೆ ಗ್ರಾಮಸ್ಥರುಯ ಸರ್ಕಾರದ ಬೆದರಿಕೆ ಮಣಿದಿಲ್ಲ. ನೀವು ಗ್ರಾಪಂ ವಿಸರ್ಜನೆ ಮಾಡುವುದೇನು..? ಗಲ್ಲು ಶಿಕ್ಷೆ ನೀಡಿದರೂ ನಾವು ಹೆದರುವುದಿಲ್ಲ ಎಂದು ಗಡಿಗ್ರಾಮದ ಗ್ರಾಮದ ಗ್ರಾಮಸ್ಥರು ಉತ್ತರ ನೀಡಿದ್ದಾರೆ.
ಮೊದಲು ನಮ್ಮ ಗ್ರಾಮಗಳಿಗೆ ಎಲ್ಲಾ ಸೌಕರ್ಯ ನೀಡಿ, ಇಲ್ಲದಿದ್ದರೆ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಜನರು ಒತ್ತಾಯ ಮಾಡಿದ್ದಾರೆ.
Join The Telegram | Join The WhatsApp |