Join The Telegram | Join The WhatsApp |
ಬೆಳಗಾವಿ :
ಸದಾ ಗಡಿ ವಿವಾದ ಕೆದಕುವ ಮಹಾರಾಷ್ಟ್ರಕ್ಕೆ ಈ ಬಾರಿ ತುಸು ಹಿನ್ನಡೆಯಾಗಿದೆ. ಯಾಕೆಂದರೆ ಆ ರಾಜ್ಯದಲ್ಲಿರುವ
ಕನ್ನಡಿಗರೇ ಸ್ವತಃ ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ನೋಡಿ ಇದೀಗ ಮಹಾರಾಷ್ಟ್ರವಾದಿಗಳು ಬೆಚ್ಚಿ ಬಿದ್ದಿದ್ದಾರೆ.
ನಕ್ಷೆಯಲ್ಲಿ ಸೇರಿಕೊಂಡಿರುವ ಪ್ರದೇಶಗಳು ಕನ್ನಡ ಭಾಷಿಕರ ಬಾಹುಳ್ಯದ ಕನ್ನಡ ಭಾಷಿಕರಿರುವ ಅಚ್ಚಗನ್ನಡ ಪ್ರದೇಶಗಳು. ಹೀಗಾಗಿ ತಮ್ಮ ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನ ಮಾಡುವಂತೆ ಗಡಿ ಕನ್ನಡಿಗರು ಒತ್ತಾಯಿಸಿದ್ದಾರೆ.
ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಉಸ್ಮಾನಬಾದ್, ಲಾತೂರ್ ಜಿಲ್ಲೆಗಳನ್ನು ಹೊಸ ನಕಾಶೆಯಲ್ಲಿ ಸೇರಿಸಲಾಗಿದೆ. ಇವೆಲ್ಲವೂ ಕರ್ನಾಟಕಕ್ಕೆ ಹೊಂದಿಕೊಂಡಿರುವ ಪ್ರದೇಶಗಳು.
ಕನ್ನಡ ಭಾಷಿಕರು ಹೆಚ್ಚು ಸಂಖ್ಯೆಯಲ್ಲಿ ಇರುವ ಜತ್ ತಾಲೂಕು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಜತ್ ತಾಲೂಕನ್ನು ಕರ್ನಾಟಕದಲ್ಲಿ ಸೇರ್ಪಡೆ ಮಾಡುವಂತೆ ತುಸು ಬಲವಾಗಿಯೇ ಒತ್ತಾಯಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಈ ಸಲ ಮಹಾರಾಷ್ಟ್ರದ ಪಾಲಿಗೆ ಭಾರಿ ಮುಖಭಂಗಕ್ಕೆ ಕಾರಣವಾಗಿದೆ.
Join The Telegram | Join The WhatsApp |