ಬೆಳಗಾವಿ : ಮಾಹಿತಿಯನ್ನು ರವಾನಿಸಲು ಮತ್ತು ಹಂಚಿಕೊಳ್ಳಲು ಗಣಕಯಂತ್ರ ಜಾಲ ಮಹತ್ವದ ಪಾತ್ರವಹಿಸುತ್ತದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಂ. ಜಿ. ಹೆಗಡೆ ಹೇಳಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಐಕ್ಯೂಎಸಿ ಗಣಕಯಂತ್ರ ವಿಭಾಗದಿಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣಕಯಂತ್ರದ ಜಾಲದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗಣಕಯಂತ್ರದ ಜಾಲದ ಕುರಿತು ತಿಳಿದುಕೊಳ್ಳಬೇಕು. ಇದರಿಂದ ಮಾರುಕಟ್ಟೆಯಲ್ಲಿ ಉದ್ಯೋಗದ ಅವಕಾಶ ಹೆಚ್ಚುತ್ತದೆ. ಗಣಕ ಯಂತ್ರದ ಜಾಲ ವೆಂದರೆ ಕೇವಲ ಉಪಕರಣಗಳ ಜೋಡಣೆಯಲ್ಲ. ಅದರಿಂದ ಜನರ ಬದುಕಿನ, ವಿಚಾರಗಳ ಜೋಡಣೆ ಆಗಬೇಕು. ಗಣಕಯಂತ್ರ ಜಾಲದಿಂದ ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾದ ಸಾಹಿಲ ನೂರ ಅಹಮದ್ ಶೇಖಾಜಿ ಅವರು ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಅಂದರೆ ಕಂಪ್ಯೂಟರ್ ಸಾಧನಗಳು. ಈ ಸಾಧನಗಳು ಮೊಬೈಲ್ ಫೋನ್ ನಿಂದು ಸರ್ವರಗಳವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ. ಫೈಬರ್ ಆಪ್ಟಿಕಲ್ ನಂತಹ ಭೌತಿಕ ತಂತಿಗಳನ್ನು ಬಳಸಿಕೊಂಡು ಈ ಸಾಧನಗಳನ್ನು ಹೇಗೆ ಸಂಪರ್ಕಿಸಬಹುದು ಎಂದು ಹೇಳಿದರು.

ವಿದ್ಯಾರ್ಥಿನಿಯರಾದ ಪದ್ಮಶ್ರೀ ದೊಡ್ಡಕಲ್ಲಣ್ಣವರ್ ವಂದಿಸಿದರು, ವಿಜಯಲಕ್ಷ್ಮೀ ನಿರೂಪಿಸಿದರು, ಕಾಣಿ ಹೂಗಾರ ಪ್ರಾರ್ಥಿಸಿದರು, ಜುಹಾ ದೇವಲಾಪುರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿದ್ಯಾರ್ಥಿಗಳಾದ ಈರಣ್ಣ ಬೆಟಗೇರಿ ಸ್ವಾಗತಿಸಿದರು, ಇಮ್ರಾನ್ ನದಾಫ್ ಪರಿಚಯಿಸಿದರು.
ಗಣಕಯಂತ್ರ ವಿಭಾಗದ ಉಪನ್ಯಾಸಕರಾದ
ಡಾ. ಜ್ಯೋತಿ ಪಾಟೀಲ, ಡಾ. ನಮಿತಾ ಪೋತರಾಜ, ಅನುಷಾ ಡಿ.ಎಸ್. ಅರ್ಚನಾ ಮಗದುಮ್, ಪ್ರವೀಣ ನಾಯ್ಕ,ಆನಂದ ಮಾಲದಿನ್ನಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.