This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನ : ಮೈತ್ರೇಯಿಣಿ ಗದಿಗೆಪ್ಪಗೌಡರ

Join The Telegram Join The WhatsApp

ಬಸವನ ಬಾಗೇವಾಡಿ :

12ನೇ ಶತಮಾನದ ಅನುಭವ ಮಂಟಪದಲ್ಲಿ ಲಿಂಗಭೇದ ಜಾತಿ ಭೇದ ಇಲ್ಲದೇ ಎಲ್ಲರಿಗೂ ಸಮಾನ ಅವಕಾಶ ನೀಡಿದ ಫಲವಾಗಿ ಅನೇಕ ಹಿಂದುಳಿದ ಶೋಷಣೆಗೆ ಒಳಗಾದ ಸ್ತ್ರೀಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಎಂದು ಬೆಳಗಾವಿಯ ಸಾಹಿತಿ ಹಾಗೂ ವಿಮರ್ಶಕಿ ಮೈತ್ರೆಯಣಿ ಗದಿಗೆಪ್ಪಗೌಡರ ಹೇಳಿದರು.

ಅವರು ಸ್ಥಳೀಯ ಯಾತ್ರಿ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ವಿಜಯಪುರದ ಮಹಿಳಾ ಸ್ನೇಹ ಸಾಹಿತ್ಯ ಸಂಗಮದ ಆಶ್ರಯದಲ್ಲಿ ನಡೆದ ಶಂಕರ ಶ್ರೀ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಇಂದುಮತಿ ಲಮಾಣಿ ಅವರ ವಚನ ವಿಹಾರ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ 12ನೇ ಶತಮಾನದ ವಚನಕಾರ್ತಿಯರು ಎನ್ನುವ ವಿಷಯದ ಕುರಿತು ಮಾತನಾಡುತ್ತಿದ್ದರು ಶೋಷಣೆಗೆ ಒಳಗಾದ ಸ್ತ್ರೀಯರಿಗೆ ಗೌರವ ಸಿಗುವ ವಾತಾವರಣ ನಿರ್ಮಾಣ ಮಾಡಿರುವದರ ಫಲವಾಗಿ ಶರಣಿಯರು ಪುರುಷರನ್ನು ಪ್ರಶ್ನೆ ಮಾಡುವ ಹಂತಕ್ಕೆ ನಿಂತಿರುವುದು ಸಾಮಾನ್ಯ ಸಂಗತಿಯಲ್ಲ ಸಮಾಜದ ಓರೆ ಕೋರೆಗಳನ್ನು ಸ್ಪಷ್ಟವಾಗಿ ತಿದ್ದುವ ನಿಟ್ಟಿನಲ್ಲಿ ಶರಣಿಯರು ಬೆಳೆದು ನಿಂತಿದ್ದರು. ಆಯ್ದಕ್ಕಿ ಲಕ್ಕಮ್ಮ ಸೂಳೆ ಸಂಕವ್ವೆ ಕದಿರೆ ರಮ್ಮವ್ವೆ ಅವರು ಬರೆದ ವಚನಗಳು ಇಂದಿಗೂ ನಮಗೆ ಮಾರ್ಗದರ್ಶಕವಾಗಿ ನಿಲ್ಲುತ್ತವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ ಎಚ್ ಬಿ ಪೋತೆ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಅವರು ಹಾಕಿದ ಮಾರ್ಗ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದು ಅವರ ದಾರಿಯಲ್ಲಿ ನಾವು ಸಾಗುವುದು ಇಂದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು ಶೋಷಣೆ ರಹಿತ ಸಮಾಜ ನಿರ್ಮಾಣವಾಗಬೇಕಾದರೆ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಒಟ್ಟಾಗಿ ಬದುಕಿ ದೇಶದ ಅಭಿವೃದ್ಧಿಗೆ ನಮ್ಮದೇ ಕೊಡುಗೆಯನ್ನು ನೀಡಬೇಕೆಂದು ಹೇಳಿದರು ಸಮಾಜದಲ್ಲಿರುವ ಮೇಲು-ಕೇಳು ಲಿಂಗಭೇದ ಹೋಗಬೇಕಾದರೆ ಬಸವಣ್ಣನವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಶಂಕರ ಶ್ರೀ ದತ್ತಿ ಪ್ರಶಸ್ತಿ ಸ್ವೀಕರಿಸಿ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಅರ್ಜುನ ಗೋಸಂಗಿ ಮಾತನಾಡಿ ದಲಿತರ ಹಿಂದುಳಿದ ನೋವುಗಳನ್ನು ಇಂದಿಗೂ ಅರ್ಥ ಮಾಡಿಕೊಳ್ಳುವಲ್ಲಿ

ಇಂದಿಗೂ ಸೋತಿದ್ದೇವೆ ಎಂದು ಹೇಳಿ ಬಸವಣ್ಣ ಜನಿಸಿದ ನಾಡಿನಲ್ಲಿ ನಾವು ಸಮಾನತೆ ತರಲು ಮತ್ತೆ ಶರಣರ ಹಾಗೂ ಅಂಬೇಡ್ಕರ್ ಅವರ ವಿಚಾರಗಳ ಪ್ರೇರಣೆ ಪಡೆದುಕೊಳ್ಳಬೇಕೆಂದು ಹೇಳಿದರು

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಮಾತನಾಡಿ ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಮಾದರಿಯಾಗಿದ್ದು ಅದರಲ್ಲೂ ವಿಶೇಷವಾಗಿ ಬಸವನಬಾಗೇವಾಡಿ ಘಟಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ವಿಷಯ ಎಂದು ಹೇಳಿದರು ಕವಿಯತ್ರಿ ಇಂದುಮತಿ ಲಮಾಣಿ ಅವರ ಸಾಹಿತ್ಯ ಸೇವೆ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು

ಇಂದುಮತಿ ಲಮಾಣಿ ಅವರ ವಚನ ವಿಹಾರ ಕೃತಿಯ ಪರಿಚಯವನ್ನು ಡಾ ಸುಜಾತಾ ಚಲವಾದಿ ಮಾಡಿಕೊಟ್ಟರು

ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು ಸನ್ಮಾನಿತರ ಪರವಾಗಿ ಸಿಂದಗಿಯ ಪತ್ರಕರ್ತ ಟಿ ಕೆ ಮಲಗೊಂಡ ಮಾತನಾಡಿದರು

ವೇದಿಕೆಯ ಮೇಲೆ ಕೃತಿ ರಚನೆಕಾರರಾದ ಲೇಖಕಿ ಇಂದುಮತಿ ಲಮಾಣಿ ಎಸ್ ಎಸ್ ಜಳಕಿ ಬಿ ಕೆ ಕಲ್ಲೂರ ಖಾನಾಪುರ ಕೃಷಿ ಅಧಿಕಾರಿ ಡಿ ಬಿ ಚೌಹಾಣ್ ಮಲ್ಲಿಕಾರ್ಜುನ್ ನಾಯಕ್ ಪೋಲಿಸ್ ಅಧಿಕಾರಿ ಜಿ ಎಸ್ ಬಸವರಾಜ ಮೊದಲಾದವರು ಉಪಸ್ಥಿತರಿದ್ದರು

ಶ ಸಾ ಪ ತಾಲೂಕು ಅಧ್ಯಕ್ಷರಾದ ವೀರಣ್ಣ ಮರ್ತುರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸಾಹಿತಿ ಪ್ರಭಾವತಿ ದೇಸಾಯಿ ಆಶಯ ನುಡಿ ಹೇಳಿದರು ಸಂಗೀತಾ ನಾಯಕ ಸ್ವಾಗತ ಗೀತೆ ಹಾಡಿದರು ಡಾ ಯುವರಾಜ ಮಾದನಶೆಟ್ಟಿ ಹಾಗೂ ಡಾ ಸವಿತಾ ಲಮಾಣಿ ನಿರೂಪಿಸಿದರು ಎಸ್ ಐ ಮನಗೂಳಿ ವಂದಿಸಿದರು

ಇದೇ ಸಂದರ್ಭದಲ್ಲಿ ಹೇಮಲತಾ ವಸ್ತ್ರದ ಅಶೋಕ್ ನಾಯಕ್ ವಿವೇಕಾನಂದ ಕಲ್ಯಾಣ ಶೆಟ್ಟಿ ದೇವೇಂದ್ರ ಗೋನಾಳ ಆರ್ ಜಿ ಅಳ್ಳಗಿ ಎಸ್ ಬಿ ಹೊಸಮನಿ ಶಿವರುದ್ರಯ್ಯ ಹಿರೇಮಠ ಶಂಕರ ಬೈಚಬಾಳ ಗಿರಿಜಾ ಪಾಟೀಲ ಜಿ ಕೆ ಮಲಗೊಂಡ್, ಶಾಂತಾ ಚೌರಿ ಮೊದಲಾದವರನ್ನು ಸನ್ಮಾನಿಸಲಾಯಿತು


Join The Telegram Join The WhatsApp
Admin
the authorAdmin

Leave a Reply