Join The Telegram | Join The WhatsApp |
ಬೆಳಗಾವಿ :
ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ , ಹಾವೇರಿ , ಗದಗ , ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿಯ ರೈತ ಸಂಘದ ಪ್ರಮುಖ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ದಿನಾಂಕ:27-12-2022 ರ ಮಂಗಳವಾರ ಸಂಜೆ 4.00 ಗಂಟೆಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸೇರಿ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.
ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ ಹಾಗೂ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ , ಸಲೀಂ ಅಹ್ಮದ್ ಹಾಗೂ ಮಾಜಿ ಸಚಿವ ಡಿ.ಬಿ.ಇನಾಮದಾರ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.
ಸೇರ್ಪಡೆಯಾಗುವವರ ಹೆಸರುಗಳು.
ಶಿವಾನಂದ ಹೊಳೆಹಡಗಲಿ, ಬೈಲಪ್ಪ ದಳವಾಯಿ, ಸಿದ್ದಣ್ಣ ಕಂಬಾರ, ಬಿಷ್ಟಪ್ಪ ಶಿಂಧೆ, ಮಡಿವಾಳಪ್ಪ ವರಗಣ್ಣವರ, ಕಲ್ಲಪ್ಪ ಕುಗಟಿ, ಕಲಗೌಡ ಪಾಟೀಲ, ಮಹಾಂತೇಶ ರಾಹುತ, ನಿಂಗಪ್ಪ ನಂದಿ, ನೀಲಕಂಠ ನೀರೋಳ್ಳಿ, ನಾಗಯ್ಯ ಪೂಜಾರ, ಭೀಮಣ್ಣ ಕಾಸಾಯಿ, ಸೇರಿದಂತೆ ಸಾವಿರಾರು ರೈತ ಸಂಘದ ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ.
Join The Telegram | Join The WhatsApp |