ಬೆಳಗಾವಿ : ಬೆಳಗಾವಿ ಪ್ರತಿಭೆ ಮಿಸ್ಟರ್ ಜಂಟಲ್ ಮೆನ್ ಎಂದೇ ಪ್ರಖ್ಯಾತಿಯಾದ ಅಜಿತ್ ರಾವ್ ಅವರು ನಟಿಸಿರುವ ಹಾಗೂ ನಮ್ಮ ಬೆಳಗಾವಿಯ ಸೃಜನಾತ್ಮಕ ನಿರ್ದೇಶಕ ಕೃಷ್ಣ ಎಸ್. ಆರ್.’ಅವರು ನಿರ್ದೇಶಿಸಿರುವ

‘DEAR ಪೊರ್ಕಿ’ ಕಿರು ಚಿತ್ರವು ಜೂನ್ 25 ರಂದು A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು, ತಾವೆಲ್ಲರೂ ಪ್ರೀತಿಯಿಂದ ನೋಡಿ ಹರಿಸಿ ಹಾರೈಸಬೇಕೆಂದು ಚಿತ್ರದ ನಾಯಕ ಮಿಸ್ಟರ್ ಅಜಿತ್ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿ, ಈಗಾಗಲೇ ರಿಲೀಸ್ ಆದ ‘DEAR ಪೊರ್ಕಿ’ ಟ್ರೈಲರನ್ನೂ
ನೋಡಿದ ಕನ್ನಡದ ಪ್ರೆಕ್ಷಕರು ಹಾಗೂ ನಮ್ಮ ಕನ್ನಡ ಸಿನಿಮಾಗಳ ದೊಡ್ಡ ದೊಡ್ಡ ಕಲಾವಿದರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು, ಹಾಗೂ ಲೂಸ್ ಮಾದಾ ಯೋಗಿ,ಜೊತೆಗೆ ನಾಯಕ ಚೇತನ್ ಚಂದ್ರ ಅವರು ಹಾಗೂ ಪ್ರಖ್ಯಾತ ಡೈರೆಕ್ಟರಾದಂತಹ ವಿಜಯ ಪ್ರಸಾದ, ರವಿ ಶ್ರೀವತ್ಸಾ ಹಾಗೂ ಬಿ. ಸುರೇಶ್, ಹೀಗೆ ಹಲವಾರು ಕಲಾವಿದರು ಸಿನಿಮಾವನ್ನು ಹಾಡಿ ಹೊಗಳಿ, ಪ್ರೀತಿಯಿಂದ ಬೆನ್ನು ತಟ್ಟಿ
ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಂಡಿದ್ದಾರೆ.

ಟ್ರೇಲರ್ ನೋಡಿದ ಪ್ರತಿಯೊಬ್ಬರ ಅಭಿಪ್ರಾಯವು
ತುಂಬಾ ಚೆನ್ನಾಗಿದ್ದು,ಉತ್ತಮ ಪ್ರಶಂಸೆ ಪಡೆದು ಕೊಂಡಿದೆ.
ಅದೇ ರೀತಿ ಈ ಚಿತ್ರವನ್ನು ನೋಡಿ ಪ್ರೀತಿಯಿಂದ ಹರಸಿ ಹಾರೈಸಿ ಎಂದು ಚಿತ್ರ ತಂಡವು ಕೇಳಿಕೊಂಡಿತು.

ಚಿತ್ರದ
ಚಿತ್ರದ ಪ್ರಾರಂಭದ ಹಂತದಲ್ಲಿ ಹತ್ತಾರು ಕಷ್ಟಗಳು ಎದುರಾಗಿದ್ದು, ಎಲ್ಲವನ್ನು ಎದುರಿಸಿ ಒಂದು ಸಿನಿಮಾದ ಪರಿಪೂರ್ಣತೆಗೆ ಏನೆಲ್ಲಾ ಬೇಕೋ ಅದನ್ನೆಲ್ಲವನ್ನು ತುಂಬಾ ಶ್ರದ್ದೆ ಯಿಂದ ಮಾಡಿದ್ದೇವೆ ಎಂದು ಹೇಳಿದರು.

ನಾವು ಮಾಡಿದ ಈ ಕಿರು ಚಿತ್ರವು ಯಾವುದೆ ಸಿನಿಮಾಗೂ ಕಡಿಮೆ ಇಲ್ಲದೆ, ಕ್ವಾಲಿಟಿ ಹಾಗೂ ಕ್ಲಾರಿಟಿಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳುವ ಮೂಲಕ, ತಮ್ಮ ಕಿರುಚಿತ್ರವನ್ನು ನೋಡಿ ಕನ್ನಡದ ಸಿನಿಮಾ ಹಾಗೂ ಕನ್ನಡದ ನಟರನ್ನು ಬೆಳೆಸಿ ಎಂದು ಚಿತ್ರದ ನಾಯಕ ನಟ ಅಜಿತ್ ರಾವ್ ಕೇಳಿಕೊಂಡರು.