Join The Telegram | Join The WhatsApp |
ಅಥಣಿ : ಇಡೀ ಕರ್ನಾಟಕದ ತುಂಬೆಲ್ಲ ಸುಮಾರು 40 ಲಕ್ಷಕ್ಕೂ ಅಧಿಕ ಮಾಳಿ ಮಾಲಗಾರ ಸಮಾಜದ ಜನರು ಇದ್ದು, ಮಾಳಿ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಮಾಜದ ಸಮಸ್ಯೆಗಳ ನಿವಾರಣೆಗಾಗಿ ಜೊತೆಗೆ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಬರುವ ಡಿಸೆಂಬರ್ 26ರಂದು ರಾಜ್ಯಮಟ್ಟದ ಮಾಳಿ ಸಮಾಜದ ಸಮಾವೇಶವನ್ನು ಮಾಡಲಾಗುತ್ತಿದ್ದು, ಈ ಸಮಾವೇಶದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶ್ರೀ ಮಹಾತ್ಮ ಜ್ಯೋತಿಬಾ ಫುಲೆ ಸರ್ಕಲ್ ನಲ್ಲಿ ಸಮಾವೇಶದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿಯೋಗ ಸಮಿತಿಯ ಅಧ್ಯಕ್ಷ ಡಾ. ಸಿ ಬಿ ಕುಲಗೋಡ್ ಅವರು ನಮ್ಮ ಸಮುದಾಯ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ, ಸರ್ಕಾರ ನಮ್ಮ ಸಮಾಜವನ್ನು ಅತಿ ಹಿಂದುಳಿದ ಸಣ್ಣ ಸಮುದಾಯಗಳೆಂದು ಗುರುತಿಸಿದ್ದು ನಾವು ಅನೇಕ ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದ್ದು ಎಲ್ಲಾ ಸಮಸ್ಯೆಗಳನ್ನ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಗಮನಕ್ಕೆ ತರುವ ಉದ್ದೇಶದಿಂದ ನಾವು ರಾಜ್ಯಮಟ್ಟದ ಸಮಾವೇಶವನ್ನು ಮಾಡಲು ತಯಾರಾಗಿದ್ದು ಎಲ್ಲಾ ಸಮಾಜ ಬಾಂಧವರು ಸಹಕಾರ ಕೊಟ್ಟು ಸಮಾವೇಶಕ್ಕೆ ಎಲ್ಲರನ್ನ ಕರೆದುಕೊಂಡು ಬಂದು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು.
ಆನಂತರ ಅಥಣಿ ಮಾಳಿ ಸಮಾಜದ ಹಿರಿಯ ಗಿರೀಶ್ ಬುಟಾಳಿ ಅವರು ಮಾತನಾಡಿ ನಮ್ಮ ಅಥಣಿ ತಾಲೂಕಿನಿಂದ ಸುಮಾರು ಸಾವಿರಕ್ಕೂ ಅಧಿಕ ಜನ ಸಮಾವೇಶದಲ್ಲಿ ಪಾಲ್ಗೊಳ್ಳುತ್ತವೆ ಸಮಾವೇಶಕ್ಕೆ ಅಥಣಿ ತಾಲೂಕಿನಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ವೇಳೆ ಸುಭಾಶ ಮಾಳಿ, ಸುಭಾಸ ಕಾಗಲೆ, ರವಿ ಬಡಕಂಬಿ, ಪ್ರಶಾಂತ ತೋಡಕರ, ಪರಶುರಾಮ ಸೋನಕರ, ಶಿವಪ್ಪ ಹಲವೇಗಾರ, ಕೇದಾರಿ ದಿವಾನಮಳ, ಮಲ್ಲು ಬಾಳಿಕಾಯಿ, ರವಿ ಭಾಸಿಂಗಿ, ರಮೇಶ ಮಾಳಿ, ಮುರುಗೇಶ ಮೋಳೆ, ಹಣಮಂತ ಭಾಸಿಂಗಿ, ರಾಜು ಮಾಳಿ ಸೇರಿದಂತೆ ಇತರರಿದ್ದರು.
Join The Telegram | Join The WhatsApp |