
ಬೆಳಗಾವಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಬೆಳಗಾವಿ ವಲಯದ ರಾಜ್ಯ ಮಟ್ಟದ ಅಣಕು ಸಂಸತ್ತನ್ನು 13 ಕ್ಕೂ ಹೆಚ್ಚು ತಂಡಗಳು ಆಯೋಜಿಸಿದ್ದು, 88 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೆಎಲ್ಎಸ್ ರಾಜ ಲಖಮಗೌಡ ಕಾನೂನು ಕಾಲೇಜಿನ ಮಲ್ಲಿಕಾರ್ಜುನ ಪೂಜಾರಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಣಕು ಸಂಸತ್ತಿಗೆ ಆಯ್ಕೆಯಾಗಿದ್ದಾರೆ, ಮಲ್ಲಿಕಾರ್ಜುನ ಪೂಜಾರಿ ಬೆಳಗಾವಿ ವಲಯ ಮಟ್ಟದಲ್ಲಿ ಭಾಷಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಬೆಳಗಾವಿ ಆರ್.ಎಲ್ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಂಶುಪಾಲ ಡಾ. ಎ.ಎಚ್. ಹವಾಲ್ದಾರ್, ಕಾಲೇಜಿನ ಕಾನೂನು ನೆರವು ಕೋಶದ ಅಧ್ಯಕ್ಷ ಪ್ರೊ. ಚೇತನ್‌ಕುಮಾರ್ ಟಿ.ಎಂ.. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ ಅವರ ಸಾಧನೆಗೆ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.