ಬೆಳಗಾವಿ : ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅನಗೋಳ ನಾಥಪೈ ಕೆರೆಯ ಹತ್ತಿರ ಇರುವ ಬಾಂದುರಗಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ವ್ಯಕ್ತಿಯೊಬ್ಬ ಕ್ರಿಸ್ಟಲ್ ಮೆಥಾಂಫೆಟಮೈನ್ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿರುವಾಗ ಖಚಿತ ಮಾಹಿತಿಯನ್ನಾಧರಿಸಿ ಡಿಸಿಪಿಗಳಾದ ರೋಹನ ಜಗದೀಶ, ಪಿ. ವಿ ಸ್ನೇಹಾ ಅವರ ಮಾರ್ಗದರ್ಶನದಲ್ಲಿ ಶೇಖರಪ್ಪ ಸಹಾಯಕ ಪೊಲೀಸ್ ಆಯುಕ್ತರು, ಖಡೇಬಜಾರ ಉಪವಿಭಾಗ, ಬೆಳಗಾವಿ ನಗರ, ಟಿಳಕವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಪೀಲ್‌ದೇವ ಎ, ಜಿ, ಪೊಲೀಸ್ ಇನ್ಸ್ಪೆಕ್ಟರ, ಟಿಳಕವಾಡಿ ಪೊಲೀಸ್ ಠಾಣೆ ಬೆಳಗಾವಿ ನಗರ, ಹಾಗೂ ಸಿಬ್ಬಂದಿಯವರಾದ ಮಹೇಶ ಪಾಟೀಲ, ಎ.ವಿ. ನೀಲಪ್ಪನವರ, ಸಿ.ಹೆಚ್.ಸಿ ನವೀನಕುಮಾರ, ಮಲ್ಲಿಕಾರ್ಜುನ ಪಾತ್ರೋಟ, ಸಿ. ಡಿ. ತೇಲಿ, ಸಿಪಿಸಿ ಸಿಬ್ಬಂದಿಯವರ ಸಹಕಾರದಿಂದ ರಿಜವಾನಖಾನ ಫಹಿಮಖಾನ ಪಠಾಣ, ಆಳವನ ಗಲ್ಲಿ, ಬೆಳಗಾವಿ ಈತನು ಅನಗೋಳ ನಾಥಪೈ ಕೆರೆಯ ಹತ್ತಿರ ಇರುವ ಬಾಂದುರಗಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಕ್ರಿಸ್ಟಲ್ ಮೆಥಾಂಫೆಟಮೈನ್ ಎಂಬ ಮಾದಕ ವಸ್ತುಗಳನ್ನು ಮಾರಾಟ ಮಾಡುವಾಗ ರೂ.3,64,500 ಜಫ್ತು ಮಾಡಿ, ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಹಾಗೂ ಅವರ ಸಿಬ್ಬಂದಿಯವರ ತಂಡವನ್ನು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, (ಕಾ&ಸು) ಉಪ ಪೊಲೀಸ್ ಆಯುಕ್ತರು, (ಅ&ಸಂ), ಬೆಳಗಾವಿ ನಗರ ರವರು ಶ್ಲಾಘಿಸಿದ್ದಾರೆ.