ಮಂಗಳೂರು : ಮಂಗಳೂರು ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ್ ಕೋಟ್ಯಾನ್ ಪಡು ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಭಿಮಾನಿ ದತ್ತಿ ಪ್ರಶಸ್ತಿ ಘೋಷಣೆಯಾಗಿದೆ. ವಿಜಯ್ ಕೋಟ್ಯಾನ್ ಅವರ ‘ಬಲೆಯೊಳಗೆ ಬುದ್ಧಿವಂತರು’ ಎಂಬ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ವಿಜಯ್ ಕೋಟ್ಯಾನ್ ಪಡು
ಮಂಗಳೂರು ವಿಜಯ ಕರ್ನಾಟಕದ ಹಿರಿಯ ವರದಿಗಾರರು. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ.ಸಂದ ಪ್ರಶಸ್ತಿಗಳು:
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ.ಗೋ (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿ (2020),
ಕರ್ನಾಟಕರ ಕಾರ್ಯನಿರತ ಪತ್ರಕರ್ತರ ಸಂಘ ಮಾನವೀಯ ವರದಿಗಾಗಿ ನೀಡುವ `ಬಿ.ಎಸ್. ವೆಂಕಟರಾಂ ವಾರ್ಷಿಕ ಪ್ರಶಸ್ತಿ (2022)ಅವರು ಈ ಮೊದಲು ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಮಾನವೀಯ ಕಳಕಳಿ ಹಾಗೂ ಸಾಮಾಜಿಕ ವರದಿಗಳ ಮೂಲಕ ಜನಮನ ಗೆದ್ದಿದ್ದಾರೆ.