ಬೆಳಗಾವಿ :
ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಅಳಿಯನನ್ನೇ ಮಾವನೊಬ್ಬ ಕೊಲೆ ಮಾಡಿದ ಘಟನೆ ರಾಮದುರ್ಗ ತಾಲೂಕು ಸುನ್ನಾಳ ಗ್ರಾಮದಲ್ಲಿ ನಡೆದಿದೆ.

ನೀಲಪ್ಪ ರೋಗನ್ನವರ (28)ಕೊಲೆಯಾದವ. ಫಕೀರಪ್ಪ ಮನಿಹಾಳ ಕೊಲೆಗೈದವ. ಅಳಿಯನ ಕತ್ತು ಹಿಸುಕಿ ಕೊಲೆ ಮಾಡಿ ಬೈಕ್ ಅಪಘಾತ ಎಂದು ಬಿಂಬಿಸಲು ಮಾವ ಫಕೀರಪ್ಪ ಪ್ರಯತ್ನಿಸಿದ್ದ. ದಾರಿಯಲ್ಲಿ ಬೈಕ್ ಮಗುಚಿ ಹಾಕಿ ಹೆಣವನ್ನು ಅಲ್ಲಿಟ್ಟು ಬೈಕ್ ಅಪಘಾತವಾಗಿದೆ ಎಂದು ತೋರಿಸಿದ್ದ. ಆದರೆ, ಪೊಲೀಸರು ಸಂಶಯದಿಂದ ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ. ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.