Join The Telegram | Join The WhatsApp |
ಬೆಳಗಾವಿ:
ಇಲ್ಲಿಯ ಸಾರ್ವಜನಿಕ ವಾಚನಾಲಯ ಪ್ರತಿವರ್ಷ ನೀಡುವ ಪತ್ರಕರ್ತ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಎಂ.ಎನ್. ಪಾಟೀಲ (ಮುಖ್ಯ ವರದಿಗಾರರು, ಲೋಕದರ್ಶನ ದಿನಪತ್ರಿಕೆ, ಬೆಳಗಾವಿ),
ಮರಾಠಿ ವಿಭಾಗದಲ್ಲಿ ಅಣ್ಣಪ್ಪ ಪಾಟೀಲ (ಪತ್ರಕರ್ತ, ತರುಣ ಭಾರತ ದಿನ ಪತ್ರಿಕೆ, ಬೆಳಗಾವಿ )ಹಾಗೂ ಎಸ್.ಆರ್.ಜೋಗ ಮಹಿಳಾ ಪತ್ರಕರ್ತೆ ಪ್ರಶಸ್ತಿ ಕನ್ನಡ ವಿಭಾಗದಲ್ಲಿ ಮಂಜುಳಾ ಪಾಟೀಲ, (ಸಂಪಾದಕಿ, ಸಂಧ್ಯಾ ಸಮಯ ದಿನ ಪತ್ರಿಕೆ, ಬೆಳಗಾವಿ) ಹಾಗೂ
ಮರಾಠಿ ವಿಭಾಗದಲ್ಲಿ ಕ್ರಾಂತಿ ಹುದ್ದಾರ (ಸಂಪಾದಕಿ, ಬೆಳಗಾವ ವಾರ್ತಾ ದಿನ ಪತ್ರಿಕೆ) ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಪ್ರಶಸ್ತಿಯನ್ನು ಜನವರಿ 18 ರಂದು ಸಂಜೆ 5:30 ಗಂಟೆಗೆ ಖಾನಾಪುರ ರಸ್ತೆಯ ಮರಾಠಾ ಮಂದಿರ ಸಭಾಗೃಹದಲ್ಲಿ ಬ್ಯಾರಿಸ್ಟರ್ ನಾಥ ಪೈ ವ್ಯಾಖ್ಯಾನಮಾಲೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Join The Telegram | Join The WhatsApp |