ದೆಹಲಿ :
ಮೊದಲ ಬಾರಿಗೆ ಕೇಂದ್ರ ಸರ್ಕಾರದ ವತಿಯಿಂದ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳಿಗೆ ‘ನ್ಯಾಷನಲ್ ಕ್ರಿಯೆಟರ್ಸ್ ಅವಾರ್ಡ್’ ಪ್ರದಾನ ಮಾಡಲಾಗಿದೆ.

ದೆಹಲಿಯ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿಗಳನ್ನು ವಿತರಿಸಿ, ಅಭಿನಂದಿಸಿದರು.

ಕರ್ನಾಟಕದ ಕಾರ್ಕಳ ಬಜಗೋಳಿಯ ಶ್ರದ್ಧಾ ಜೈನಾ ಅವರಿಗೆ ಸಹ ಪ್ರಶಸ್ತಿ ಲಭಿಸಿದೆ. ಬಜಗೋಳಿಯ ವರ್ಧಮಾನ ಜೈನ್ ಮತ್ತು ದಿ.ಸುಶೀಲಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಶ್ರದ್ಧಾ ಒಬ್ಬರು. ಅಯ್ಯೋ ಶ್ರದ್ಧಾ ಎಂಬ ಯುಟ್ಯೂಬ್ ಚಾನೆಲ್ ಅವರು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಅವರು ಮಾತನಾಡಿ ಪ್ರಶಸ್ತಿ ಸ್ವೀಕರಿಸುವ ವೇಳೆ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿದ್ದರೂ ಭಾರತೀಯರು ನಗುವ ಮಾರ್ಗ ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.

ಉತ್ತಮ ಕಥೆಗಾರ, ದಿ ಡಿಸ್ಕ್ಟಿಪ್ಟರ್, ಸೆಲೆಬ್ರಿಟಿ ಕ್ರಿಯೇಟರ್, ಗ್ರೀನ್ ಚಾಂಪಿಯನ್, ಸಾಮಾಜಿಕ ಬದಲಾವಣೆಗೆ ಅತ್ಯುತ್ತಮ ಕ್ರಿಯೇಟರ್, ಅತ್ಯಂತ ಪ್ರಭಾವಶಾಲಿ ಕೃಷಿ ಕ್ರಿಯೇಟ‌ರ್, ಸಾಂಸ್ಕೃತಿಕ ರಾಯಭಾರಿ, ಬೆಸ್ಟ್‌ ಟ್ರಾವೆಲ್ ಕ್ರಿಯೇಟರ್, ಸ್ವಚ್ಛತಾ ರಾಯಭಾರಿ, ನ್ಯೂ ಇಂಡಿಯನ್ ಚಾಂಪಿಯನ್, ಟೆಕ್ ಕ್ರಿಯೇಟರ್, ಹೆರಿಟೇಜ್ ಫ್ಯಾಶನ್, ಮೋಸ್ಟ್ ಕ್ರಿಯೇಟಿವ್ ಕ್ರಿಯೇಟ‌ರ್ (ಪುರುಷ ಮತ್ತು ಮಹಿಳೆ), ದಿ ಬೆಸ್ಟ್ ಕ್ರಿಯೇಟರ್ ಇನ್ ಫುಡ್ ಕೆಟಗರಿ, ದಿ ಬೆಸ್ಟ್ ಕ್ರಿಯೇಟ‌ರ್ ಇನ್ ಎಜುಕೇಶನ್‌ ಮತ್ತು ಇಂಟರ್ನ್ಯಾಷನಲ್ ಕ್ರಿಯೇಟ‌ರ್ ಅವಾರ್ಡ್ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಪ್ರಶಸ್ತಿಯನ್ನು
ಪ್ರಶಸ್ತಿ ವಿಜೇತರ ಪಟ್ಟಿ

ಪ್ರೇರಕ ಭಾಷಣಕಾರ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡೂ ಹಿಕ್ಸ್ ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾ ಇನ್ಫೋುಯೆನ್ಸರ್‌ಗಳಿಗೆ ಪ್ರಶಸ್ತಿಗಳನ್ನು ನೀಡಿದರು.

* ಜಯ ಕಿಶೋರಿಗೆ ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಕ್ರಿಯೇಟರ್ ಅವಾರ್ಡ್ ನೀಡಲಾಯಿತು

ಅವರಿಗೆ ಆಹಾರ ವಿಭಾಗದಲ್ಲಿ ಉತ್ತಮ ಕ್ರಿಯೇಟರ್‌ ಪ್ರಶಸ್ತಿ

* ಡೂ ಹಿಕ್ಸ್ ಅವರಿಗೆ ಅತ್ಯುತ್ತಮ ಇಂಟರ್ನ್ಯಾಷನಲ್ ಕ್ರಿಯೇಟ‌ರ್ ಅವಾರ್ಡ್

* ಕಾಮಿಯಾ ಜೈನ್ ಅವರಿಗೆ ಅತ್ಯುತ್ತಮ ಟ್ರಾವೆಲ್ ಕ್ರಿಯೇಟ‌ರ್ ಅವಾರ್ಡ್‌

* ರಣವೀರ್ ಅಲ್ಲಾಬಾಡಿಯಾ (ಬೀರ್ ಬೈಸಿಪ್ಸ್) ಅವರಿಗೆ ಡಿಸ್ತುಪ್ಟ‌ರ್ ಆಫ್ ದಿ ಇಯರ್ ಅವಾರ್ಡ್

* ಆರ್‌ಜೆ ರೌನಾಕ್ (Bauaa) ಅವರಿಗೆ ಮೋಸ್ಟ್ ಕ್ರಿಯೆಟಿವ್ ಕ್ರಿಯೆಟ‌ರ್ (ಪುರುಷ) ಅವಾರ್ಡ್

ಕರ್ನಾಟಕದ ಶ್ರದ್ಧಾ ಜೈನ್ ಅವರಿಗೆ ಮೋಸ್ಟ್ ಕ್ರಿಯೇಟಿವ್ ಕ್ರಿಯೇಟರ್ (ಮಹಿಳೆ) ಅವಾರ್ಡ್

* ಅರಿದಮ್ಯಾನ್ ಅವರಿಗೆ ಬೆಸ್ಟ್‌ ಮೈಕ್ರೋ ಕ್ರಿಯೇಟ‌ರ್ ಅವಾರ್ಡ್‌

* ನಿಶ್ಚಯ್ ಅವರಿಗೆ ಬೆಸ್ಟ್ ಕ್ರಿಯೇಟರ್ ಇನ್ ಗೇಮಿಂಗ್ ಕೆಟಗರಿ ಅವಾರ್ಡ್

* ಅಂಕಿತ್ ಬೈಯನಪುರಿಯಾಗೆ ಬೆಸ್ಟ್ ಹೆಲ್ತ್ ಆಯಂಡ್ ಫಿಟ್‌ನೆಸ್ ಕ್ರಿಯೇಟ‌ರ್ ಅವಾರ್ಡ್

* ನಮನ್ ದೇಶ್‌ಮುಖ್‌ಗೆ ಬೆಸ್ಟ್‌ ಕ್ರಿಯೇಟರ್‌ಇನ್‌ ಎಜುಕೇಶನ್ ಕೆಟಗರಿ ಅವಾರ್ಟ್

* ಜಾನ್ಹವಿ ಸಿಂಗ್‌ಗೆ ಹೆರಿಟೇಜ್ ಫ್ಯಾಶನ್ ಐಕಾನ್ ಅವಾರ್ಡ್

* ಮಲ್ದಾರ್ ಕಲಂಬೆ ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ

* ಗೌರವ್ ಚೌಧರಿಗೆ ಬೆಸ್ಟ್ ಕ್ರಿಯೇಟ‌ರ್ ಇನ್ ಟೆಕ್ ಕೆಟಗರಿ ಅವಾರ್ಡ್

* ಮೈಥಿಲಿ ಠಾಕೂರ್‌ಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ

* ಪಂಕ್ತಿ ಪಾಂಡೆಗೆ ಫೇವರಿಟ್ ಗ್ರೀನ್ ಚಾಂಪಿಯನ್ ಅವಾರ್ಡ್

* ಕೀರ್ತಿಕಾ ಗೋವಿಂದಸ್ವಾಮಿಗೆ ಅತ್ಯುತ್ತಮ ಕತೆಗಾರ ಪ್ರಶಸ್ತಿ

* ಅಮನ್ ಗುಪಗೆ ಸೆಲೆಬ್ರಿಟಿ ಕ್ರಿಯೇಟರ್