ಸಿದ್ದಾಪುರ : ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಳದಲ್ಲಿ ವರ್ಷಾವಧಿಯ ಮಕರ ಸಂಕ್ರಮಣದ ಉತ್ಸವವು ಜ.14 ರಿಂದ ಜ.16 ರ ತನಕ ನಡೆಯಲಿದೆ.
ಜ.14 ರ ಬೆಳಿಗ್ಗೆ ಗಂ 9ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ,ವಿವಿಧ ಪೂಜೆಗಳು, ರಾತ್ರಿ ಗಂ 10.30 ಕ್ಕೆ ಗೆಂಡಸೇವೆ, ಜ.15 ನೇ ಬುಧವಾರ ಬೆಳಗ್ಗೆ ಗಂ 9.30 ಕ್ಕೆ ಮಹಾಮಂಗಳಾರತಿ, ಮಂಡಲ ಸೇವೆ, ಜ.16 ನೇ ಗುರುವಾರ ಬೆಳಗ್ಗೆ ಗಂ.9.30 ರಿಂದ ಮಹಾಪೂಜೆ, ಮಂಡಲ ಸೇವೆ, ರಾತ್ರಿ ಗಂ.8 ರಿಂದ ಕಡಬು ನ್ಯೆವೇದ್ಯ , ಮಹಾಮಂಗಳಾರತಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಯಕ್ಷಗಾನ ಸೇವೆ ಆಟ, ಜ.17 ರ ಬೆಳಗ್ಗೆ ಗಂ.9 ಕ್ಕೆ ಸಂಪ್ರೋಕ್ಷಣೆ ನಡೆಯಲಿದೆ. ಜ.14 ರ ಜಾತ್ರೆಯ ದಿನ ರಾತ್ರಿ ಗಂ.8 ರ ತನಕ ಎಲ್ಲಾ
ಸೇವೆಗಳು, ಹಣ್ಣು ಕಾಯಿ ಸೇವೆಗಳು
ನಡೆಯುತ್ತವೆ,ತದನಂತರ ರಾತ್ರಿ ಗಂ. 10 ಕ್ಕೆ ಗೆಂಡಸೇವೆ ಆರಂಭವಾಗುವುದರಿಂದ ಹಣ್ಣು ಕಾಯಿ ಸಹಿತ ಯಾವುದೇ
ಸೇವೆಗಳು ಇರುವುದಿಲ್ಲ, ಜ.15 ರ ಬೆಳಗ್ಗೆ ಗಂ.7.30 ರ ನಂತರವೇ ಎಲ್ಲಾ ಸೇವೆಗಳು ಪುನಃ ಆರಂಭವಾಗಲಿವೆ ಎಂದು ಅನುವಂಶೀಯ ಆಡಳಿತ ಮೊಕ್ತೇಸರ ಸಿ.
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.