ಬೆಂಗಳೂರು : ಕರ್ನಾಟಕದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯು 2025ರ ಮಾರ್ಚ್ 24ರಿಂದ ಅರಂಭಗೊಂಡು ಏಪ್ರಿಲ್ 17ವರೆಗೂ ಇರಲಿದೆ. ತಾತ್ಕಾಲಿಕ ವೇಳಾಪಟ್ಟಿ ಶುಕ್ರವಾರ ಬಿಡುಗಡೆಯಾಗಲಿದ್ದು, ಅಂತಿಮ ವೇಳಾಪಟ್ಟಿ ಡಿಸೆಂಬರ್ ಎರಡನೇ ವಾರ ಪ್ರಕಟವಾಗಲಿದೆ.

ತಾತ್ಕಾಲಿಕ ವೇಳಾ ಪಟ್ಟಿ ಹೀಗಿದೆ

2025 ರ ಮಾರ್ಚ್ 24 ಸೋಮವಾರ ಗಣಿತಶಾಸ್ತ್ರ

2025 ರ ಮಾರ್ಚ್ 28 ಶುಕ್ರವಾರ ಇಂಗ್ಲೀಷ್ ( ದ್ವಿತೀಯ ಭಾಷೆ)

2025 ರ ಏಪ್ರಿಲ್ 1 ಮಂಗಳವಾರ ವಿಜ್ಞಾನ

2025 ರ ಏಪ್ರಿಲ್ 4 ಶುಕ್ರವಾರ ಸಮಾಜ ಶಾಸ್ತ್ರ

2025 ರ ಏಪ್ರಿಲ್ 7 ಸೋಮವಾರ ಕನ್ನಡ( ಮೊದಲ ಭಾಷೆ)

2025 ರ ಏಪ್ರಿಲ್ 11 ಶುಕ್ರವಾರ ಹಿಂದಿ(ತೃತೀಯ ಭಾಷೆ) ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್‌ ವಿಷಯಗಳು