ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮಿಷನರ್ ಹುದ್ದೆಗೆ ಡಿಐಜಿಪಿ ಇಡಾ ಮಾರ್ಟಿನ್ ಅವರನ್ನು ನೇಮಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 2009 ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಾರ್ಟಿನ್ ಸದ್ಯ ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿ ಪೊಲೀಸ್ ಆಯುಕ್ತರಾಗಿದ್ದ ಸಿದ್ದರಾಮಪ್ಪ ಎಸ್‌.ಎನ್ ಫೆ.29ರಂದು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಐಪಿಎಸ್ ವಲಯ ಐಜಿಪಿ ವಿಕಾಸಕುಮಾರ್‌ಗೆ ಹೆಚ್ಚುವರಿ ಪ್ರಭಾರ ಅಧಿಕಾರ ನೀಡಲಾಗಿತ್ತು.