Join The Telegram | Join The WhatsApp |
ಹುಕ್ಕೇರಿ: ಪಟ್ಟಣದ ಲಿಂಗಾಯತ ಸಮಾಜ ಸೇವಾ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಹರಗುರು ಚರಮೂರ್ತಿ ಹಾಗೂ ಪುರವಂತರ ನೇತ್ರತ್ವದಲ್ಲಿ ಸಾಮೂಹಿಕ ಗುಗ್ಗುಳೋತ್ಸವ ಜನೇವರಿ ರವಿವಾರ ದಿ.22 ರಂದು ಹಮ್ಮಿಕೊಂಡಿದೆ.
ಗುಗ್ಗಳೋತ್ಸವವನ್ನು ಮದುವೆಯಾಗಿ ಮಕ್ಕಳಾದರೂ ಕೆಲವರಿಗೆ ಹೆಚ್ಚಿನ ವೆಚ್ಚವಾಗುವದರಿಂದ ಸಾಧ್ಯವಾಗಿಲ್ಲ. ಬಡಜನರ ಒತ್ತಾಯದ ಮೇರೆಗೆ ಮೂರನೆ ಬಾರಿಗೆ ಹಮ್ಮಿಕೊಂಡಿರುವ ಸಾಮೂಹಿಕ ಗುಗ್ಗಳೋತ್ಸವ ಹಮ್ಮಿಕೊಳ್ಳಲಾಗಿದೆ.
ಒಂದು ಜೊತೆ ಎರಡು ಹಂಚಿಗೆ 1500 ರೂ ನಿಗದಿಪಡಿಲಾಗಿದೆ.ಗುಗ್ಗಳ ಹೊರುವವರು ಹೊಸ ಬಟ್ಟೆ ಮಾತ್ರ ತರುವದು.ಉಳಿದ ಮಾಲೆ ದಂಡಿ,ಎಣ್ಣಿ, ಕರಡಿ ಮಜಲು,ಮತ್ತು ಪುರವಂತರ,ಹಾಗೂ ಮಹಾಪ್ರಸಾದವನ್ನು ಸಂಘದಿಂದ ಮಾಡಲಾಗುವದು.
ರವಿವಾರ ದಿ. 22 ಬೆಳಿಗ್ಗೆ 7ಗಂಟೆಗೆ ಅಡವಿಸಿದ್ದೇಶ್ವರ ಮಠದಲ್ಲಿ ನಿಡಸೋಸಿಯ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳು ಚಾಲನೆ ನೀಡುವರು.
ಪಟ್ಟಣದ ವಿವಿಧ ಬಡಾವಣೆಗಲ್ಲಿ ಪುರವಂತರ,ಹಾಗೂ ಸಕಲ ವಾಧ್ಯದೊಂದಿಗೆ ಹಾಯ್ದು ಸಾಯಿ ಮಂದಿರದಿಂದ ಶ್ರೀ ಅಡವಿಸಿದ್ದೇಶ್ವರ ಮಠಕ್ಜೆ ಬರುವದು.
ಗುಗ್ಗಳೋತ್ಸದ ನಿಮಿತ್ಯ ೫ ಸಾವಿರ ಜನರಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕಮೀಟಿಯಿಂದ ಮಾಡಲಾಗುವದು.ಪಟ್ಟಣ ಸೇರಿದಂತೆ ಬೇರೆ ಜಿಲ್ಲೆಗಳ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ಅಧ್ಯಕ್ಷ ಎನ್.ಆರ್.ಪಾಟೀಲ,,ಉಪಾಧ್ಯಕ್ಷ ಡಿ.ಎಸ್.ನಾಯಿಕ ,ಭರಮಗೌಡ ಪಾಟೀಲ,ಎಸ.ಬಿ ಅಲಗರಾವುತ,ಸುರೇಶ ಸಾವಳಗಿ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 9964057702, 8884894089, 880942559, 9901521527 ಸಂಪರ್ಕಿಸಲು ತಿಳಿಸಿದ್ದಾರೆ.
Join The Telegram | Join The WhatsApp |