Join The Telegram | Join The WhatsApp |
ದೆಹಲಿ :
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಯಲ್ಲಿಂದು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕುರಿತ ಮಹತ್ವದ ಸಭೆ ಸಂಜೆ 7 ಕ್ಕೆ ದೆಹಲಿಯಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಹತ್ವದ ಸಭೆಯಲ್ಲಿ ಭಾಗವಹಿಸುವರು. ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಈ ಸಭೆ ಭಾರಿ ಕುತೂಹಲ ಕೆರಳಿಸಿದೆ.
ಹೇಗಾದರೂ ಮಾಡಿ ಬೆಳಗಾವಿ ಗಡಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ತಲುಪಿಸಬೇಕು ಎಂಬ ಮಹಾರಾಷ್ಟ್ರದ ನಿಲುವಿಗೆ ಇದೀಗ ಮೊದಲ ಹಂತದಲ್ಲಿ ಯಶಸ್ಸು ಸಿಕ್ಕಿದ್ದು ಅಮಿತ್ ಶಾ ನೀಡುವ ಸಲಹೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೀರುವ ಸಾಧ್ಯತೆಗಳು ಬಹು ಕಡಿಮೆ. ಒಂದು ವೇಳೆ ಅಮಿತ್ ಶಾ ಕರ್ನಾಟಕಕ್ಕೆ ವ್ಯತಿರಿಕ್ತವಾಗುವ ಸೂಚನೆಗಳನ್ನು ನೀಡಿದರೆ ಅವುಗಳನ್ನು ಬೊಮ್ಮಾಯಿ ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ. ಯಾಕೆಂದರೆ ಅವರ ಸಿಎಂ ಪಟ್ಟವನ್ನು ನಿರ್ಧರಿಸುವವರು ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ. ಹೀಗಾಗಿ ಬೊಮ್ಮಾಯಿ ತೆಗೆದುಕೊಳ್ಳಲಿರುವ ನಿರ್ಧಾರದ ಬಗ್ಗೆ ಇಡೀ ಕರ್ನಾಟಕ ಅಚ್ಚರಿ ರೀತಿಯಿಂದ ನೋಡುತ್ತಿದೆ.
Join The Telegram | Join The WhatsApp |