ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹6.65 ಲಕ್ಷ ಹಣವನ್ನು ತಾಲ್ಲೂಕಿನ ಬಾಚಿ ಚೆಕ್ ಪೋಸ್ಟ್‌ನಲ್ಲಿ ಸೋಮವಾರ ಮಧ್ಯರಾತ್ರಿ ಚುನಾವಣೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ, ಅಮೂಲ್ ವಿದ್ಯಾಧರ ಅವರಿಂದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಚುನಾವಣೆ ಹತ್ತಿರವಾದಂತೆ ಬೆಳಗಾವಿ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ಬಿಗಿ ಕಾರ್ಯಾಚರಣೆ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯಿಂದ ಬೇರೆ ರಾಜ್ಯಕ್ಕೆ ಹೋಗುವ ಹಾಗೂ ಆ ರಾಜ್ಯಗಳಿಂದ ಬೆಳಗಾವಿಗೆ ಬರುವ ವಾಹನಗಳ ತಪಾಸಣೆ ಇದೀಗ ತೀವ್ರಗೊಂಡಿದೆ. ಚುನಾವಣೆ ಹತ್ತಿರವಾದಂತೆ ಅಕ್ರಮಣ ಸಾಗಾಟ ನಡೆಯಬಹುದು ಎಂಬ ಶಂಕೆ ಮೇಲೆ ಇದೀಗ ಪೊಲೀಸರು ಪ್ರತಿಯೊಂದು ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.