ಬೆಳಗಾವಿ: ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ 5 ಲಕ್ಷ ರೂ. ಚೆಕ್ ವಿತರಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದ ಯಲ್ಲಪ್ಪ ದ್ಯಾ ಬೋರಣ್ಣವರ ಎಂಬ ವ್ಯಕ್ತಿ ಕಳೆದ ತಿಂಗಳು ನೇಸರಗಿ ಹತ್ತಿರವಿರುವ ಕೊಳದೂರು ಗ್ರಾಮದ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಮೃತರ ಮನೆಗೆ ತೆರಳಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿ, 5 ಲಕ್ಷ ರೂ,ಗಳ ಪರಿಹಾರದ ಚೆಕ್ ನ್ನು ಮೃತನ ಹೆಂಡತಿ ಭಾರತಿ ಯಲ್ಲಪ್ಪ ಬೋರಣ್ಣವರ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಬೈಲಹೊಂಗಲ ತಹಸಿಲ್ದಾರ ಶಿರಹಟ್ಟಿ, ಕಂದಾಯ ನಿರೀಕ್ಷಕ ಶಶಿಧರ್ ಗುರವ ಉಪಸ್ಥಿತರಿದ್ದರು.