ಬೆಳಗಾವಿ: ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದ ಶಾಹುನಗರದ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿಸಿದ್ದಾರೆ.
ಕುಟುಂಬದ ಸದಸ್ಯರಿಗೆ ಮಂಗಳವಾರ ಸಚಿವರು ಚೆಕ್ ನೀಡಿದರು.
ಬೆಳಗಾವಿಯ ಶಾಹುನಗರದಲ್ಲಿ ಕಳೆದ ವರ್ಷ ಮನೆಯಲ್ಲಿ ನೀರು ಕಾಯಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದರು.
ಈರಪ್ಪ ಗ ರಾಠೋಡ್, ಶಾಂತವ್ವ ಈ ರಾಠೋಡ್ ಹಾಗೂ ಅನ್ನಪೂರ್ಣ ಅ ರಾಠೋಡ್ ಸ್ಥಳದಲ್ಲಿಯೇ ಮೃತಪಟ್ಟ ಹಿನ್ನೆಲೆಯಲ್ಲಿ, ಮೃತರ ಕುಟುಂಬದವರು ಬಡವರಾಗಿರುವ ಕಾರಣ ಆ ಕುಟುಂಬದವರಿಗೆ ಸಚಿವರು ವಿಶೇಷ ಪ್ರಯತ್ನದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದಾರೆ.
ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.