ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದ ಶ್ರೀರಾಮ್ ನಗರ ಹಾಗೂ ಗಂಗಾಧರ್ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಚಾಲನೆ ನೀಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ರಾಕೇಶಗೌಡ ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಾಗೇಂದ್ರ ಕುರಬರ, ಕೃಷ್ಣ ಹಿರೇಮಠ್, ಮಂಜು ಮಾದರ್, ಎನ್ ವೈ ಬಡಿಗೇರ್, ಶಿವು ಸೈಬಣ್ಣವರ್, ಅನಂತ ಚರನ್, ಗುಂಡು ಕಣಬರ್ಕರ್, ಲಕ್ಷ್ಮಣ ಪೂಜೇರಿ ಮುಂತಾದವರು ಉಪಸ್ಥಿತರಿದ್ದರು.