ಚಂದಗಡ: ಚಂದಗಡ ತಾಲೂಕಿನ ಶಿನೋಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರ ಆಹ್ವಾನದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಸಂಪ್ರದಾಯದ ಪ್ರಕಾರ ಪೂಜೆಯಲ್ಲಿ ಭಾಗವಹಿಸಿದರು.

ಮೇ ತಿಂಗಳಿನಲ್ಲಿ ಜಾತ್ರೆ ಜರುಗಲಿದ್ದು, ಗ್ರಾಮದಲ್ಲಿ ದೇವಿಗೆ ಶುಕ್ರವಾರ ಪೂಜೆ ಹಮ್ಮಿಕೊಳ್ಳಲಾಗಿತ್ತು, ಜಾತ್ರೆಯ ಆರಂಭಕ್ಕೂ ಮುನ್ನ ಪಾಲಿಸಲಾಗುವ ಪ್ರಮುಖ ಸಂಪ್ರದಾಯದ ಪೂಜೆ ಇದಾಗಿದೆ. ಇದೇ ಸಮಯದಲ್ಲಿ ಗ್ರಾಮಸ್ಥರ ಸನ್ಮಾನವನ್ನು ಸ್ವೀಕರಿಸಿ, ಜಾತ್ರಾ ಮಹೋತ್ಸವಕ್ಕೆ ಸಚಿವರು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಚಂದ್ರಕಲಾ ಬಾಮುಚೆ, ಡಾ. ಐಶ್ವರ್ಯ ಪಾಟೀಲ, ದೀಪಕ್‌ ಪಾಟೀಲ, ನಿತಿನ್ ಪಾಟೀಲ, ಬಾಬು ಪಾಟೀಲ, ಶ್ಯಾಮಜಿ ಸುತಾರ್, ವಿನೋದ್ ಪಾಟೀಲ, ಅಮೃತ್ ಮಿನಸೆ, ಶಿರಪತಿ ಗೋಡೆಕರ್, ಶಂಕರ್ ಪಾಟೀಲ, ಜ್ಯೋತಿಬಾ ಪಾಟೀಲ, ಮಹಾದೇವ್ ಗುಂಜಿಕರ್, ರಾಜೇಶ್ ಪಾಟೀಲ, ಅರುಣ ಸುತಾರ್, ಪರಶುರಾಮ್ ಪಾಟೀಲ ಇದ್ದರು.