ಬೆಳಗಾವಿ: ಬೆಳಗಾವಿ- ಚೋರ್ಲಾ -ಗೋವಾ ರಸ್ತೆ ಹದಗೆಟ್ಟಿದ್ದು, ಈ ರಸ್ತೆಯ ಪರಿಸ್ಥಿತಿಯನ್ನು ಖುದ್ದಾಗಿ ಪರಶೀಲಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಸ್ತೆ ದುರಸ್ಥಿಗೆ ತುರ್ತು ಕ್ರಮ ಕೈಗೊಂಡಿದ್ದಾರೆ.

ಶನಿವಾರ 1-00 ಗಂಟೆಗೆ ಕಣಕುಂಬಿ ಹತ್ತಿರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚೋರ್ಲಾ ರಸ್ತೆಯ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಬೆಳಗಾವಿ- ಗೋವಾ ರಸ್ತೆಗೆ ಈಗ ದುರಸ್ಥಿ ಭಾಗ್ಯ ಗೋವಾಕ್ಕೆ ಹೋಗುವ ಪ್ರಯಾಣಿಕರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ ಯಾಕಂದ್ರೆ ಈ ರಸ್ತೆ ಸಂಚಾರ ಸುಗಮವಾಗಲಿದೆ.
ಬೆಳಗಾವಿ – ಚೋರ್ಲಾ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಬೆಳಗಾವಿ – ರಾಮನಗರ – ಗೋವಾ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬೆಳಗಾವಿಯಿಂದ ಗೋವಾಗೆ ಹೋಗುವ ಬಹುತೇಕ ಎಲ್ಲ ವಾಹನಗಳು ಚೋರ್ಲಾ ಮಾರ್ಗದಲ್ಲಿ ಓಡಾಡುತ್ತಿವೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಾಮಾಜಿಕ ಕಾಳಜಿ ಮತ್ತು ಇಚ್ಛಾಶಕ್ತಿಯ ಪರಿಣಾಮ ಹದಗೆಟ್ಟು ಹೋಗಿರುವ ಮುಖ್ಯ ರಸ್ತೆ ಈಗ ರಿಪೇರಿ ಆಗುತ್ತಿರುವದು ಸಂತಸದ ಸಂಗತಿಯಾಗಿದೆ.