
ಬೆಳಗಾವಿ: ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಮತ್ತು ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳು ಬೆಳಗಾವಿ ನಿಲ್ದಾಣಕ್ಕೆ ಆಗಮನದ ಸಮಯವನ್ನು 2025ರ ಜೂನ್ 19 ರಿಂದ ಪರಿಷ್ಕರಿಸಿದೆ.
ರೈಲು ಸಂಖ್ಯೆ 07302 ಮಿರಜ್ – ಬೆಳಗಾವಿ ವಿಶೇಷ ರೈಲು ಬೆಳಗಾವಿಗೆ ಆಗಮಿಸುವ ಸಮಯವನ್ನು ಈಗಿರುವ 12:50 ಗಂಟೆಗಳಿಂದ 13:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 07304 ಮಿರಜ್ – ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲಿನ ಆಗಮನದ ಸಮಯವನ್ನು ಬೆಳಗಾವಿ ನಿಲ್ದಾಣದಲ್ಲಿ 20:35 ಗಂಟೆಗಳಿಂದ 21:00 ಗಂಟೆಗಳಿಗೆ ಪರಿಷ್ಕರಿಸಲಾಗಿದೆ.