ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳಹಾಗೂ ಹೊರ‌ರೋಗಿಗಳ ಸಂಖ್ಯೆ ದಿನೇ‌ದಿನೇ ಹೆಚ್ಚಾಗುತ್ತಿದ್ದು ಔಷಧಿ ಪಡೆಯಲು ಜನ ದಟ್ಟನೆ ಇದ್ದು ಇದಕ್ಕಾಗಿ ಪ್ರತ್ಯೇಕ ಔಷಧಾಲಯ ಕೌಂಟರನ್ನು ತೆರೆಯಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದರು.

ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಸಮಸ್ಯೆಯನ್ನು ಆಲಿಸಿದರು. ಔಷಧಿ ಪಡೆಯಲು ಜನ ನೂಕು ನುಗ್ಗಲು ಉಂಟಾಗುತ್ತಿದೆ, ಸುಮಾರು ಹೊತ್ತಿನತನಕ ಔಷಧಕ್ಕಾಗಿ ಕಾಯಬೇಕಿದೆ ಎಂದು ಸಾರ್ಬಜನಿಕರು ಶಾಸಕರಲ್ಲಿ ಅವಲತ್ತುಕೊಂಡಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಕೊರತೆಗಳಿಲ್ಲದೆ, ಜನರಿಗೆ ಉತ್ತಮ ಸೇವೆ ದೊರೆಯುತ್ತಿರುವ ಕಾರಣ ಆಸ್ಪತ್ರೆಗೆ ಬರುವ ರೋಗಿಗಳ ಸಂಂಖ್ಯೆ ಹೆಚ್ಚಾಗುತ್ತಿದೆ.‌ಜನರ ಸಮಸ್ಯೆ ನಿವಾರಿಸಲು ಹೆಚ್ಚುವರಿ ಮೆಡಿಕಲ್ ಕೌಂಟರ್ ತೆರೆಯುವಂತೆ ಸೂಚನೆ ನೀಡಿದರು.‌ಸರಕಾರಿ ಆಸ್ಪತ್ರೆಗೆ ಬರುವ ಪ್ರತೀಯೊಬ್ನರಿಗೂ ಇಲ್ಲಿ ತೃಪ್ತಿದಾಯಕ ಸೇವೆ ದೊರೆಯಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕರು ಹೇಳಿದರು.
ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ, ಆಸ್ಕರ್ ಆನಂದ , ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ , ಮುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಮುರಳೀಧರ್ ರೈ ಮಟಂತಬೆಟ್ಟು,ಸಿದ್ದಿಕ್ ಸುಲ್ತಾನ್, ವಿಕ್ಟರ್ ಪಾಯಸ್ , ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಮೊದಲಾದವರು ಉಪಸ್ಥಿತರಿದ್ದರು