ಪುತ್ತೂರು: ಚುನಾವಣೆಯ ವೇಳೆ ಮನೆ ಇಲ್ಲದವರಿಗೆ ಮನೆ,ನಿವೇಶನ ಇಲ್ಲದವ‌ಬಡವರಿಗೆ ನಿವೇಶನ ಕೊಡುತ್ತೇನೆ ಎಂದು ಹೇಳಿದ್ದೆ. ಆ ಮಾತನ್ನು ಪಾಲಿಸುತ್ತೇನೆ ಇದಕ್ಕಾಗಿ ಏಳು ಗ್ರಾಮದಲ್ಲಿ ಜಾಗ ಕಾಯ್ದಿರಿಸಲಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ವಲಯ ಅಧ್ಯಕ್ಷರು‌ ಮತ್ತು ಬೂತ್ ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿ ಜಾಗ ಎಲ್ಲೂ ಇಲ್ಲ ಎಂಬ ಮಾತು ಆರಂಭದಲ್ಲಿ ಇತ್ತು ಗ್ರಾಮದಲ್ಲಿ ಜಾಗವನ್ನು ಹುಡುಕಿ ಮೀಸಲಿಡುವ ಕೆಲಸ ಆಗಿದೆ. ಮನೆ ಇಲ್ಲದ ,ಒಂದು ಸೆಂಟ್ಸ್ ಜಾಗವೂ ಇಲ್ಲದ ಬಡವರಿಗೆ ತಲಾ ಮೂರು ಸೆಂಟ್ಸ್ ಜಾಗವನ್ನು ಉಚಿತವಾಗಿ ಕೊಡುವ ಕೆಲಸ ನಡೆಯಲಿದೆ ಎಂದು ಶಾಸಕರು ಹೇಳಿದರು.
ಕಾಂಗ್ರೆಸ್ ಸರಕಾರದ ಸಾಧನೆಗಳು, ಪಂಚ ಗ್ಯಾರಂಟಿಗಳನ್ನು ನಾವು ಜನರಿಗೆ ತಿಳಿ ಹೇಳಬೇಕು. ಇದುವರೆಗೂ ಯಾವುದೇ ಸರಕಾರ ಕೊಡದ ಪಂಚ ಗ್ಯಾರಂಟಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಇದನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ದಿನೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಪುತ್ತೂರು ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್,
ಬ್ಲಾಕ್ ಕಾರ್ಯದರ್ಶಿ ರವಿಪ್ರಸಾಸ್ ಶೆಟ್ಟಿ ಬನ್ನೂರು ಸ್ವಾಗತಿಸಿ ವಂದಿಸಿದರು.