ಪುತ್ತೂರು: ಜನ ನನ್ನಿಂದ ಏನು‌ನಿರೀಕ್ಷೆ ಇಟ್ಟುಕೊಂಡಿದ್ದರೂ ಆ ನಿರೀಕ್ಷೆಯನ್ನು‌ನಾನು‌ಎಂದಿಗೂ ಹುಸಿ‌ಮಾಡಲ್ಲ, ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ, ಬೆಟ್ಟಂಪಾಡಿ ಗ್ರಾಮದ ಬಹು ರಸ್ತೆಗಳಿಗೆ ಈ ಬಾರಿ ಅನುದಾನ ನೀಡಿದ್ದೇನೆ ,ಜನತೆ ಅಭಿವೃದ್ದಿ ಪರ ಮತ ಚಲಾಯಿಸುವ ಪೃವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆಯಲ್ಲಿ ನಡೆದ 41.5 ಲಕ್ಷ ರೂ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಿ‌ಮಾತನಾಡಿದರು.
ಕಳೆದ ಬಾರಿ‌ಮಾಡಿರುವ ಗುದ್ದಲಿ ಪೂಜೆಯ‌ಕಾಮಗಾರಿ ಇನ್ನೂ ಆಗಿಲ್ಲ, ಇದಕ್ಕೆ ಕಾರಣವೂ ಇದೆ, ಚುನಾವಣಾ ನೀತಿ ಸಂಹಿತೆ ಒಂದು ಕಡೆಯಾದರೆ, ಈ ಬಾರಿಯ ವಿಪರೀತ ಮಳೆಯೂ ಒಂದು ಕಾರಣವಾಗಿದೆ. ಕಳೆದ ಬಾರಿ‌ ಗುದ್ದಲಿ ಪೂಜೆ ನಡೆದ‌ಎಲ್ಲಾ ಕಾಮಗಾರಿಗಳೂ ಈ ಬಾರಿ ನಡೆಯಲಿದೆ. ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಅಪಪ್ರಚಾರವೂ ಕೆಲವು ಕಡೆದಿದೆ ಜನರಿಗೆ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ‌ಎಂದು ಶಾಸಕರು ಹೇಳಿದರು.

ಚೆಲ್ಯಡ್ಕ‌ಮುಳುಗು ಸೇತುವೆಗೆ‌ಮುಕ್ತಿ
ಕಳೆದ 40 ವರ್ಷಗಳಿಂದ ಪ್ರತೀ‌ಮಳೆಗಾಲದಲ್ಲಿ‌ ಮುಳುಗಡೆಯಾಗುತ್ತಿದ್ದ ಚೆಲ್ಯಡ್ಕ ಸೇತುವೆಗೆ ನಾನು‌ಮುಕ್ತಿ‌ ಕಾಣಿಸಿದ್ದೇನೆ,‌ಶಾಸಕನಾದ 6 ತಿಂಗಳಲ್ಲೇ ಇದಕ್ಕೆ 3 ಕೋಟಿ ಅನುದಾನ ತಂದಿದ್ದೇನೆ, ಕಾಮಗಾರಿಗೆ ಟೆಂಡರ್‌ಪ್ರಕ್ರಿಯೆ‌ಮುಗಿದಿದೆ ಇನ್ನು ಕೆಲವೇ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು‌ ತಿಳಿಸಿದ ಶಾಸಕರು. ಇಷ್ಟು ವರ್ಷಗಳೇ ಕಳೆದರೂ ಈ‌ಮುಳುಗು ಸೇತುವೆ ಹೀಗೇ ಇರಲು ಯಾರು ಕಾರಣ? ಇಚ್ಚಾ ಶಕ್ತಿಯ ಕೊರತೆಯಿಂದ ಬಹುಕಾಲದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿತ್ತು ಎಂದ ಶಾಸಕರು ಈ ಬಾರಿ ಜನರ ಬೇಡಿಕೆ ಈಡೇರಿಸಿದ್ದೇನೆ ಎಂದು ಹೇಳಿದರು.

ಜನ‌ಎಲ್ಲವನ್ನೂ ಅರಿತಿದ್ದಾರೆ
ಜನತೆಗೆ ಕ್ಷೇತ್ರದ, ರಾಜ್ಯದ, ದೇಶದ ಎಲ್ಲಾ ವಿಚಾರಗಳ ಬಗ್ಗೆ ಅರಿವು ಇದೆ. ಯಾರು ಅಭಿವೃದ್ದಿ‌ಮಾಡಿದ್ದಾರೆ, ಯಾರು ಜನರ‌ಪರ ಎಂಬುದನ್ನೂ ಅರತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ‌ನೆಲೆಸಿದೆ ಎಂದು ಹೇಳಿದ ಶಾಸಕರು ಜನ ಅಭಿವೃದ್ದಿ ಪರ ಸರಕಾರಕ್ಕೆ ಬೆಂಬಲ ನೀಡಬೇಕು‌ಎಂದು ಮನವಿ‌ಮಾಡಿದರು.

ಯುವಕರಿಗೆ ಉದ್ಯೋಗ
ಕ್ಷೇತ್ರದ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ‌ ನನ್ನ ಪ್ರಯತ್ನವನ್ನು‌ ಮಾಡುತ್ತಿದ್ದೇನೆ, ಕೆಎಸ್ ಆರ್ ಟಿ ಸಿ,ಮೆಸ್ಕಾಂ‌ನಲ್ಲಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ತರಬೇತಿಯನ್ನು‌ನೀಡುತ್ತಿದ್ದೇನೆ. ವಿವಿಧ ಕಂಪೆನಿಯ ಸಹಭಾಗಿತ್ವದಲ್ಲಿ ಪುತ್ತೂರಿನ ಯುವಕರಿಗೆ ಮುಂದಿನ ವಾರ ಸುಮಾರು‌ 200 ಮಂದಿಗೆ ಉದ್ಯೋಗ ಕೊಡಿಸುವ ಕೆಲಸವನ್ನು‌ಮಾಡಲಿದ್ದೇನೆ. ಯುವಕರ ಕೈಗೆ ಉದ್ಯೋಗ ಕೊಡಬೇಕೆ‌ವಿನಾ ಅವರ‌ಮನಸ್ಸಿನಲ್ಲಿ ಕೆಟ್ಡದ್ದನ್ನು ತುಂಬ ಬಾರದು ಎಂದು‌ಮನವಿ‌ ಮಾಡಿದ ಶಾಸಕರು ಪ್ರತೀಯೊಬ್ಬ ತಂದೆ ತಾಯಿ ಯೂ ತನ್ನ‌ಮಗನಿಗೆ ಉತ್ತಮ‌ಉದ್ಯೋಗ ದೊರೆಯಬೇಕು ಎಂಬ ಕನಸು‌ ಉಳ್ಳವರಾಗಿದ್ದು ಅವರ‌ಕನಸನ್ನು‌ ನನಸು‌ಮಾಡುವ ಉದ್ದೇಶ ನನಗಿದೆ ಎಂದು‌ಶಾಸಕರು ಹೇಳಿದರು.

ಶಾಸಕರಿಂದ ಪುತ್ತೂರಿನ ಅಭಿವೃದ್ದಿ
ಶಾಸಕ ಅಶೋಕ್ ರೈ ಅವರ ಕಾರಣಕ್ಕೆ ಇಂದು ಪುತ್ತೂರು ವಿಧಾಬ ಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಬೆಟ್ಟಂಪಾಡಿ ಗ್ರಾಮ ಸೇರಿದಂತೆ ಕ್ಷೇತ್ರದ ಪ್ರತೀಯೊಂದು ಗ್ರಾಮಕ್ಕೂ ಶಾಸಕರು‌ಸಮಾನ ರೀತಿಯಲ್ಲಿ‌ಅನುದಾನವನ್ನು‌ ಹಂಚುವ ಕಾರ್ಯವನ್ನು ಮಾಡುತ್ತಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಪುತ್ತೂರು ಕ್ಷೇತ್ರ ಅಭಿವೃದ್ದಿ ಕಾಣಲಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ ಹೇಳಿದರು.
ಜನ‌ಮುಂದಿನ‌ ದಿನಗಳಲ್ಲಿ‌ ಅಶೋಕ್ ರೈ ಗೆ ಬೆಂಬಲ ನ್ನು‌ನೀಡಬೇಕು ಅದೇ ರೀತಿ ರಾಜ್ಯದ ಕಾಂಗ್ರೆಸ್ ಸರಕಾರಕ್ಕೂ ಬೆಂಬಲ‌ನೀಡಬೇಕು‌ಎಂದು ಮನವಿ‌ಮಾಡಿದರು.

ಬೆಟ್ಟಂಪಾಡಿಗೆ ಆರೋಗ್ಯ ಕೇಂದ್ರ ಬೇಕು
ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ ಬೆಟ್ಟಂಪಾಡಿ ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರದ ಅಗತ್ಯತೆ ಇದೆ ಇದಕ್ಕೆ ಶಾಸಕರು ಸಹಕಾರ‌ನೀಡಬೇಕು. ಗ್ರಾಮದಲ್ಲಿರುವ ಜೇನು‌ಸಂಃದ ಕಟ್ಟಡ ಪಾಳು ಬಿದ್ದಿದೆ ಅದನ್ನು ಮರುಬಳಕೆ ಮಾಡುವಲ್ಲಿ ಕ್ರಮವಹಿಸಬೇಕು ಎಂದು‌ಶಾಸಕರಲ್ಲಿ‌ಮನವಿ‌ ಮಾಡಿದರು.
ಕಾರ್ಯಕ್ರಮದಲ್ಲಿ ಕೆ‌ಪಿ ಭಟ್, ಗ್ರಾಪಂ ಸದಸ್ಯರಾದ ಮೊಯಿದು, ಸುಮಲತಾ, ಮಹಾಲಿಂಗ ನಾಯ್ಕ, ಸದಾಶಿವ ರೈ ಚೆಲ್ಯಡ್ಕ, ಪುತ್ತು ಚೆಲ್ಯಡ್ಕ, ಬ್ಲಾಕ್ ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಗುತ್ತಿಗೆದಾರ ರಾಕೇಶ್ ರೈ ಕುದ್ಕಾಡಿ, ಅಬೂಬಕ್ಕರ್ ಕೊರಿಂಗಿಲ,‌ಮಾಧವ‌ಪೂಜಾರಿ ರೆಂಜ, ದಯನಾಂದ ರೈ ಕೊರ್ಮಂಡ,ದಾಮೊದರ ಪಾಟಾಳಿ ಉಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.