This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

Join The Telegram Join The WhatsApp

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಅರಭಾವಿ ಮಂಡಲ ಬೂಥ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

      

ಮೂಡಲಗಿ :

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಈಗಿನಿಂದಲೇ ಬೂಥ್ ಮಟ್ಟದಿಂದ ದುಡಿಯುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಸೋಮವಾರದಂದು ಅರಭಾವಿ ಮಂಡಲ ಬೂಥ್ ವಿಜಯ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನ ನಾಮಬಲದೊಂದಿಗೆ ಪಕ್ಷದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುವಂತೆ ಹೇಳಿದರು.

ಬಿಜೆಪಿಯು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪ್ರೀಯ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಪ್ರಚಾರ ಮಾಡಬೇಕು. ಶಿಸ್ತಿನಿಂದ ಬೂಥ್ ಮಟ್ಟದಿಂದ ಕೆಲಸವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರತಿಯೊಂದು ಮತಗಟ್ಟೆಗಳಲ್ಲಿ ವಾಟ್ಸ್ ಪ್ ಗುಂಪುಗಳನ್ನು ರಚಿಸಬೇಕು. ಈ ಮೂಲಕ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡುವಂತಾಗಬೇಕು. ಬಿಜೆಪಿಯ ಎಲ್ಲ ಪೂರ್ವ ನಿಗಧಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಇದರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಕಾರ್ಯದರ್ಶಿ ಮುತ್ತೆಪ್ಪ ಮನ್ನಾಪೂರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪರಸಪ್ಪ ಬಬಲಿ, ಮಹಾಂತೇಶ ಕುಡಚಿ, ಗ್ರಾಪಂ ಅಧ್ಯಕ್ಷ ಸುನೀಲ ಪಾಶ್ಚಾಪೂರ, ನ್ಯಾಯವಾದಿ ಎಂ.ಕೆ. ಕುಳ್ಳೂರ, ಬಸವರಾಜ ಮಾಳೇದವರ, ಮೂಡಲಗಿ ತಾಲೂಕಾ ಭೂ ನ್ಯಾಯಮಂಡಳಿ ಸದಸ್ಯ ಬಸವರಾಜ ಕಾಡಾಪೂರ, ಶಬ್ಬೀರ ತಾಂಬಿಟಗಾರ, ರಾಮನಾಯ್ಕ ನಾಯ್ಕ, ಗಂಗಪ್ಪ ಡಬ್ಬನ್ನವರ, ನಿಜಗುಣಿ ಅಥಣಿ, ಮಹಾದೇವ ದಂಡಾಪೂರ, ಶಂಕರ ಇಂಚಲ, ಅಪ್ಪಯ್ಯ ಪಾಟೀಲ, ಸಲೀಮ ಜಮಾದಾರ, ಹಾಜಿ ನದಾಫ, ಪಾಂಡು ಮಹೇಂದ್ರಕರ, ಯುವಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಎಸ್‍ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಎಸ್‍ಸಿ ಮೋರ್ಚಾ ಅಧ್ಯಕ್ಷ ನಾಗರಾಜ ಕುದರಿ, ಕೇದಾರಿ ಭಸ್ಮೆ, ಅಜೀತ ಪಾಟೀಲ, ಪರಪ್ಪ ಹಡಪದ, ಚಂದ್ರಶೇಖರ ಪತ್ತಾರ, ಬಿಜೆಪಿ ಪದಾಧಿಕಾರಿಗಳು, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮಂಡಲದ ಹುಣಶ್ಯಾಳ ಪಿಜಿ ಬೂಥ್ ನಂ. 145 ಮತ್ತು 146 ರ ಬೂಥ್ ಅಧ್ಯಕ್ಷರ ಮನೆಗಳ ಮೇಲೆ ಬಿಜೆಪಿ ಬಾವುಟಗಳನ್ನು ಹಾರಿಸುವ ಮೂಲಕ ಬೂಥ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದರು.


Join The Telegram Join The WhatsApp
Admin
the authorAdmin

Leave a Reply