
ಪುತ್ತೂರು: ಸುಳ್ಯದ ಕನಕಮಜಲಿನಲ್ಲಿ ಕೆಲದಿನಗಳ ಹಿಂದೆ ಕಾರು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬೆಟ್ಟಂಪಾಡಿಯ ಕಕ್ಕೂರು ನಿವಾಸಿ ರಾಮಯ್ಯ ರೈ ಮತ್ತು ಅವರ ಅಳಿಯ ಸಾವನ್ನಪ್ಪಿದ ಘಟನೆ ಯ ಆರೋಪಿ ಕಾರು ಚಾಲಕ ಘಟನೆಯ ಬಳಿಕ ಪರಾರಿಯಾಗಿದ್ದರು. ವಾರದ ಬಳಿಕವೂ ಆತನ ಪತ್ತೆಯಾಗಿರಲಿಲ್ಲ. ಕುಡಿದು ವಾಹನ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರ ಸಾವಿಗೆ ಕಾರಣನಾದ ಕಾರು ಚಾಲಕನನ್ನು ಬಂಧಿಸಲು ಸಾಧ್ಯವಾಗದೆ ಇದ್ದರೆ ಅವನ ಅಪ್ಪನನ್ನು ಬಂಧಿಸಿ ಎಂದು ಶಾಸಕರು ಶನಿವಾರ ಪೊಲೀಸರಿಗೆ ಸೂಚನೆ ನೀಡಿದ್ದರು. ಶಾಸಕರ ಸೂಚನೆ ವೈರಲ್ ಆಗುತ್ತಿದ್ದಂತೆಯೇ ಭಾನುವಾರ ಬೆಳಿಗ್ಗೆಯಿಂದ ಆರೋಪಿಯ ಅಪ್ಪನೂ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮೃತ ರಾಮಯ್ಯ ರೈ ಅವರ ಮನೆಗೆ ಶನಿವಾರ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ ಅವರು ಕುಟುಂಬಕ್ಕೆ ಸಾಂತ್ವನ ತಿಳಿಸಿಆರ್ಥಿಕ ನೆರವುನೀಡಿದ್ದರು. ಈ ವೇಳೆ ರಾಮಯ್ಯರ ಮನೆಯಿಂದಲೇ ಪೊಲೀಸರಿಗೆ ಈ ಸೂಚನೆ ನೀಡಿದ್ದರು.