Join The Telegram | Join The WhatsApp |
ಗೋಕಾಕ:
ಶಾಸಕ ರಮೇಶ ಜಾರಕಿಹೊಳಿ ಅವರು ದಾಖಲೆಯ ಗೆಲುವಿನ ಅಂತರವನ್ನು ಇಡಿ ರಾಜ್ಯವೇ ನೋಡಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ಅವರು ಮಾಡಿರುವ ಪ್ರಗತಿಪರ ಕಾರ್ಯಗಳ ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯಮಾಡಬೇಕು ಎಂದು ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ ಹೇಳಿದರು.
ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲಗಳ “ವಿಜಯ ಸಂಕಲ್ಪ ಅಭಿಯಾನ” ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಗೋಕಾಕ ರಾಜಕೀಯದಲ್ಲಿ ಹೆಸರುವಾಸಿ, ಶಾಸಕ ರಮೇಶ ಜಾರಕಿಹೊಳಿ ಪವರ್ ಫುಲ್ ನಾಯಕರು. ಅವರು ದಾಖಲೆ ಮತಗಳ ಲೀಡ್ ಪಡೆಯಲು ವಿಜಯ ಸಂಕಲ್ಪ ಅಭಿಯಾನ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ, ಕಾಂಗ್ರೆಸ್ ಪಕ್ಷದಂತೆ ಲೀಡರ್ ಗಳಿಗೆ ಇಲ್ಲಿ ಅವಕಾಶವಿಲ್ಲ. ತಳಮಟ್ಟದ ಕಾರ್ಯಕರ್ತರಿಗೂ ಇಲ್ಲಿ ಅವಕಾಶವಿದೆ ಎಂದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿಯೊಬ್ಬ ಕಾರ್ಯಕರ್ತರು ದುಡಿಯಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕರಪತ್ರ ಹಂಚಿಕೆ, ಗೊಡೆ ಬರಹ, ಸ್ಟೀಕರ್ ಅಂಟಿಸುವದು, ಮನ ಕೀ ಬಾತ್ ವೀಕ್ಷಣೆ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷರೊಂದಿಗೆ ಪದಾಧಿಕಾರಿಗಳು ಸಹ ತಮ್ಮ ಬೂತ್‌ನಲ್ಲಿ ಮಾಡುವಂತೆ ತಿಳಿಸಿದರು.
ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಜಿಲ್ಲಾ ಉಪಾಧ್ಯಕ್ಷ ಸುಭಾಸ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಸುರೇಶ ಸನದಿ, ಹನಮಂತ ದುರ್ಗನ್ನವರ, ಬಸವರಾಜ ಹಿರೇಮಠ, ಲಕ್ಷ್ಮಣ ತಪಸಿ, ಶಶಿಧರ ದೇಮಶೆಟ್ಟಿ, ಜ್ಯೋತಿ ಕೊಲ್ಹಾರ, ಶ್ರೀದೇವಿ ತಡಕೊಡ ಇದ್ದರು.
ಕಾರ್ಯಕ್ರಮದ ನಂತರ ಶಾಸಕ ಪಿ ರಾಜೀವ್ ವಾಹನಗಳಿಗೆ ಸ್ಟೀಕರ್ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ಯುವಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ಆನಂದ ಅತ್ತುಗೋಳ ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಪದಾಧಿಕಾರಿಗಳು ನೂರಾರು ಕಾರ್ಯಕರ್ತರು ಇದ್ದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ ಸ್ವಾಗತಿಸಿದರು, ಎಲ್ ಎಚ್ ಭಂಡಿ ನಿರೂಪಿಸಿ, ವಂದಿಸಿದರು.
Join The Telegram | Join The WhatsApp |