Join The Telegram | Join The WhatsApp |
ಗೋಕಾಕ:
ಗೋಕಾಕ ಗ್ರಾಮೀಣ ಹಾಗೂ ನಗರದಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಿ ನಗರದ ಸೌಂದರ್ಯಿಕರಣಕ್ಕು ಶ್ರಮಿಸುತ್ತಿರುವುದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು, ಸೋಮವಾರದಂದು ನಗರದ ಸಣ್ಣ ಹನುಮಂತ ದೇವರ ದೇವಸ್ಥಾನದ ಹತ್ತಿರ ನಗರಸಭೆಯಿಂದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ೩೦ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರಕ್ಕೆ ಮೇಲಿಂದ ಮೇಲೆ ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳಿಂದ ಆಗುವ ಪ್ರವಾಹದಿಂದ ರಕ್ಷಣೆ ಪಡೆಯಲು ಚಿಕ್ಕೋಳ್ಳಿಯಿಂದ ಲೋಳಸೂರ ಫೂಲ್ ವರೆಗೆ ಸುಮಾರು ಮೂರು ಕೀ.ಮೀ ರಕ್ಷಣಾ ಗೊಡೆಯನ್ನು ೭೦೦ ಕೋಟಿ ವೆಚ್ಚದಲ್ಲಿ ಲಂಡನ್ನಿನ ಥೀಮ್ಸ್ ನದಿಗೆ ನಿರ್ಮಿಸಿದಂತೆ ಮಹಾ ಯೋಜನೆ ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವದು. ನಗರದಲ್ಲಿ ೬೫೦ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ನೀಡಲಾಗುವದು. ೫೧ಲಕ್ಷ ರೂ ವೆಚ್ಚದಲ್ಲಿ ಮುಂದಿನ ಭವಿಷ್ಯದ ನೀರಿನ ಸಮಸ್ಯೆಗೆ ಸ್ಫಂಧಿಸಲು ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗುವದು. ೮೦ಲಕ್ಷ ರೂಗಳ ವೆಚ್ಚದಲ್ಲಿ ಉದ್ಯಾನವನ ಹಾಗೂ ತಾಲೂಕ ಆಡಳಿತ ಸೌಧದ ಪಕ್ಕದಲ್ಲಿ ೯.೮೫ಕೋಟಿ ವೆಚ್ಚದಲ್ಲಿ ನೂತನ ನಗರಸಭೆ ಕಟ್ಟಡವನ್ನು ನಿರ್ಮಿಸಲಾಗುವದು. ನಗರದ ಜನತೆ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ ಅವರು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವಂತೆ ತಿಳಿಸಿದರು.
ನಗರಾಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ಹಿರಿಯ ಸದಸ್ಯ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ ಪೌರಾಯುಕ್ತ ಶಿವಾನಂದ ಹಿರೇಮಠ ಇದ್ದರು.
Join The Telegram | Join The WhatsApp |