This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಇಳಿವಯಸ್ಸಿನ ತಾಯಿಗೆ ಕಟೀಲು ದುರ್ಗೆಯ ದರ್ಶನ ಮಾಡಿಸಿದ ಪುತ್ರ ತಿಪಟೂರಿನ ಆಧುನಿಕ ಶ್ರವಣ ಕುಮಾರ 

Join The Telegram Join The WhatsApp

ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದ ಮಗ

ಮೂಲ್ಕಿ : 

ದೃಷ್ಟಿಹೀನರಾದ ತಮ್ಮ ತಂದೆ ತಾಯಿಗಳ ತೀರ್ಥಯಾತ್ರೆ ಕೈಗೊಳ್ಳಬೇಕೆಂಬ ಆಸೆಯನ್ನು ಈಡೇರಿಸಲು ಶ್ರವಣಕುಮಾರ ಬೆತ್ತದ ಬುಟ್ಟಿಯಲ್ಲಿ ತನ್ನ ತಂದೆ ತಾಯಿಯರನ್ನು ಕುಳ್ಳಿರಿಸಿ ಹೆಗಲಲ್ಲಿ ಹೊತ್ತು ಕೊಂಡು ತೀರ್ಥಯಾತ್ರೆಗೆ ಕರೆದೊಯ್ಯುವ ಕಥೆಯನ್ನು ಪಾಠ ಪುಸ್ತಕಗಳಲ್ಲಿ ನೋಡಿದ್ದೇವೆ . ಅದೇ ರೀತಿ ಇಲ್ಲೊಬ್ಬ ಆಧುನಿಕ ಶ್ರವಣ ಕುಮಾರನಂತಿರುವ ತಿಪಟೂರಿನ ಶಿವರುದ್ರಯ್ಯ ಎಂಬವರು ತಮ್ಮ 99 ವರ್ಷದ ಇಳಿವಯಸ್ಸಿನಲ್ಲಿರುವ ತಾಯಿಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದು ದೇವಿಯ ದರ್ಶನ ಮಾಡಿಸಿದ್ದಾರೆ.

ಶಿವರುದ್ರಯ್ಯ ಅವರ ತಾಯಿಗೆ ಒಂದು ಕಣ್ಣಿನ ದೃಷ್ಟಿ ಹೋಗಿದ್ದು , ತಿಪಟೂರಿನಿಂದ ಬಸ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ. ಬಳಿಕ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದು ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿಸಿದ್ದಾರೆ. ಮನುಷ್ಯ ಸಂಬಂಧಗಳಿಗೆ ಬೆಲೆಯಿಲ್ಲದ ಈ ಕಾಲದಲ್ಲಿ ತನ್ನ ತಾಯಿಗೆ ಪುಣ್ಯಕ್ಷೇತ್ರದ ದರ್ಶನ ಮಾಡಿಸಿದ ಇವರು ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. ಈ ಫೋಟೊವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Join The Telegram Join The WhatsApp
Admin
the authorAdmin

Leave a Reply