ದೆಹಲಿ :
ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ದೇಶವನ್ನೇ ಒಗ್ಗೂಡಿಸಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ಅವಧಿ ದೇಶದ ಜನರಲ್ಲಿ ಏಕತೆಯ ಭಾವನೆಯನ್ನು ಮೂಡಿಸಿತ್ತು ಎಂದು ಅವರು ಹೇಳಿದ್ದಾರೆ.

ರವಿವಾರ ತಮ್ಮ ತಿಂಗಳ ಮತ್ತು ಪ್ರಸಕ್ತ ವರ್ಷದ ಮೊದಲ “ಮನ್‌ ಕಿ ಬಾತ್‌’ನಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂದಿರ ಉದ್ಘಾಟನೆ ವೇಳೆ ದೇಶದ ಎಲ್ಲರೂ ಏಕತೆಯನ್ನು ಪ್ರದರ್ಶಿಸಿದರು. ಈ ಒಗ್ಗಟ್ಟು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತ ಕೊಂಡೊಯ್ಯಲು ನೆರವಾಗಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ರಾಮನ ಕುರಿತಾಗಿರುವ ಭಕ್ತಿ ಗೀತೆಗಳನ್ನು ಹಾಡಿದ ವೀಡಿಯೋವನ್ನು ನೂರಾರು ಮಂದಿ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದರ ಜತೆಗೆ ಮಕರಸಂಕ್ರಾತಿಯಿಂದ ಮೊದ ಲ್ಗೊಂಡು ಜ. 22ರ ವರೆಗೆ ದೇಶಾದ್ಯಂತ ಸ್ವತ್ಛತೆ ಅಭಿಯಾನ ಕಾರ್ಯಕ್ರಮಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಅಭಿಯಾನ ನಿರಂತರವಾಗಿರಬೇಕು ಎಂದಿದ್ದಾರೆ.

ಆಡಳಿತ ದೇಶದ ಸಂವಿಧಾನ ರಚನೆಕಾರರಿಗೆ ಸ್ಫೂರ್ತಿಯಾಗಿತ್ತು ಎಂದು ಹೇಳಿದ ಅವರು, ಈ ಕಾರಣದಿಂದಲೇ ಆ ದಿನ ಮಾತನಾಡಿದ್ದ ವೇಳೆ ದೇವರಿಂದ ದೇಶ ಮತ್ತು ರಾಮನಿಂದ ರಾಷ್ಟ್ರ ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.