This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ರಾಜ್ಯದಲ್ಲಿ ಮಾಯವಾದ ಮೋದಿ ಹವಾ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

Join The Telegram Join The WhatsApp

ಬೆಳಗಾವಿ: ಸದ್ಯ ಕರ್ನಾಟಕದಲ್ಲಿ ಮೋದಿ ಹವಾ ಮಾಯವಾಗಿದ್ದು, ಈಗ್‌ ರಾಜ್ಯದಲ್ಲಿರುವ ಬಿಜೆಪಿ ಮುಖಂಡರು ಬಾಡಿರುವ ಕಮಲಕ್ಕೆ ನೀರು ಸಿಂಪರಿಸುವ ಕಾರ್ಯ ಮಾಡುತ್ತಿದ್ದಾರೆ, ಇವರ ಸರ್ಕಸ್‌ .. ಸಕ್ಸಸ್ ಆಗಲ್ಲ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಮುಂದೆ ಪೊಳ್ಳು ಭರವಸೆಗಳನ್ನ ಹೇಳುತ್ತಿದೆ. ಮುಂಬರುವ 2023ರ ಚುನಾವಣೆಯಲ್ಲಿ ಮತದಾರರು ಸಂಪೂರ್ಣ “ಕೈ” ಹಿಡಿಯಲಿದ್ದಾರೆ ಎಂದರು.

ಮಹಿಳಾ ಸಬಲೀಕರಣಗೋಸ್ಕರ ಮೈಸೂರು ಅರಮನೆ ಮೈದಾನದಲ್ಲಿ ಇಂದು ಕಾಂಗ್ರೆಸ್‌ ಪಕ್ಷದ ವತಿಯಿಂದ “ನಾ ನಾಯಕಿ ” ಸಮಾವೇಶ ನಡೆದಿದ್ದು, ಇದು ಮುಖ್ಯವಾಗಿ ಮಹಿಳೆಯರಗೋಸ್ಕರವಾಗಿದೆ” ಎಂದ ಅವರು,ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಕಾಲದಲ್ಲಿ ಸ್ತ್ರಿ ಶಕ್ತಿ ಸಂಘ ಸೇರಿದಂತೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮಹಿಳೆಯರಿಗೆ ಮೀಸಲಾತಿ, ಹಕ್ಕು, ಪಿಂಚಣಿ, ಸರ್ಕಾರದಿಂದ ಸಿಗುವ ಸೈಟ್ ಕೂಡ ಹೆಣ್ಣು ಮಕ್ಕಳಿಗೆ ನೀಡಲು ಕಾನೂನು ತಂದಿದ್ದೇವೆ. ಪ್ರಿಯಾಂಕಾ ಗಾಂಧಿ ಅವರು ದೊಡ್ಡ ನಾಯಕತ್ವವನ್ನು ಹೊಂದಿದ್ದಾರೆ. ನಮ್ಮ ಕುಟುಂಬದಲ್ಲಿರುವ ಎಲ್ಲರೂ ನಾಯಕಿಯರು ಎಂಬ ಭಾವನೆ ನಮ್ಮಲ್ಲಿದೆ ಎಂದರು.

ಬಡವರಿಗೆ ಬೆಳಕು ನೀಡಲು ಕಾಂಗ್ರೆಸ್‌ ಬದ್ಧ: ಹಿಂದೆ ಬಿಜೆಪಿ ಸರ್ಕಾರ ರಾಜ್ಯದ ಮೇಲೆ ಸಾಕಷ್ಟು ಸಾಲದ ಭಾರವನ್ನ ಇರಿಸಿ ಹೋಗಿತ್ತು. ನಂತರ ಸಿದ್ದರಾಮಯ್ಯನವರ ಸರ್ಕಾರ ಬಂದ ಬಳಿಕ ಬಿಜೆಪಿ ಮಾಡಿದ ಸಾಲವನ್ನು ತಿರಿಸುವ ಕೆಲಸ ಮಾಡಲಾಗಿದೆ. 1. ಕೋಟಿ 25 ಲಕ್ಷ ಮನೆಗಳಿಗೆ 200 ಯೂನ್ಯಿಟ್‌ ಉಚಿತ ವಿದ್ಯುತ್‌ಗೆ 9 ಸಾವಿರ ಕೋಟಿ ರೂ. ನಮ್ಮ ಸರ್ಕಾರಕ್ಕೆ ಯಾವುದೇ ಹೊರೆ ಆಗುತ್ತಿವುದಿಲ್ಲ ಎಂದ ಅವರು, ವರ್ಷಕ್ಕೆ 9 ಸಾವಿರ ಕೋಟಿ ರೂ. ಬಡವರ ಬೆಳಕಿಗಾಗಿ ಖರ್ಚು ಮಾಡಲು ನಮ್ಮ ಕಾಂಗ್ರೆಸ್‌ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಗಿಪ್ಟ್‌ ಪಾಲಿಟಿಕ್ಸ್‌ ಅವಶ್ಯವಿಲ್ಲ: ಗ್ರಾಮೀಣ ಭಾಗದಲ್ಲಿ ಗಿಪ್ಟ್‌ ಪಾಲಿಟಿಕ್ಸ್‌ ನಡೆಯುತ್ತಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಇಂತಹ ಪಾಲಿಟಿಕ್ಸ್‌ ನಡೆಸತ್ತಿರಾ ಎಂಬ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಸತೀಶ ಜಾರಕಿಹೊಳಿ ಅವರು, ನಮ್ಮ ಕ್ಷೇತ್ರದಲ್ಲಿ ಇಂತಹ ಗಿಪ್ಟ್‌ ಪಾಲಿಟಿಕ್ಸ್‌ ಅವಶ್ಯವಿಲ್ಲ, ನಾವು ಏನೂ ಇದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮುಖಾಂತರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವ ಕಾರ್ಯ ಮಾಡಿದ್ದೆವೆ ಎಂದು ಹೇಳಿದರು.

ಪಾಲಿಕೆಯಲ್ಲಿ ಮೇಯರ್‌ – ಉಪಮೇಯರ ಹೆಸರಿಗೆ ಮಾತ್ರ : ಮಹಾನಗರದ ಪಾಲಿಕೆಯಲ್ಲಿ ಮೇಯರ್‌ ಮತ್ತು ಉಪಮೇಯರ ಆಯ್ಕೆ ದಿನಾಂಕ ಘೋಷಣೆ ಆಗಿದೆ.ಅದರಲ್ಲೂ, ಮಹಿಳೆಯರಿಗೆ ಮೀಸಲಾತಿ ಬಂದಿರುವುದು ಖುಷಿ ವಿಚಾರ. ಆದರೆ, ಪಾಲಿಕೆಯಲ್ಲಿ ಹೆಸರಿಗೆ ಮಾತ್ರ ಮೇಯರ್‌ ಮತ್ತು ಉಪಮೇಯರ ಇರಲಿದ್ದು, ಅಲ್ಲಿ ಕಾರ್ಯಭಾರಿ ನಡೆಸುವವರೇ ಇಬ್ಬರ ಬಿಜೆಪಿ ಶಾಸಕರು ಎಂದ ಅವರು, ಪಾಲಿಕೆಯಲ್ಲಿ ನೂತನವಾಗಿ ಆಯ್ಕೆಯಾಗುವ ಮೇಯರ್‌ಗೆ ಕಾರು ಮತ್ತು ಪೇಟಾ ವಾಲಾ ಇರುವದನ್ನೇ ನೋಡಿಯೇ ನಾವು ಖುಷಿ ಪಡಬೇಕಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನ್ನಮನ್ನವರ, ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇತರರು ಇದ್ದರು.


Join The Telegram Join The WhatsApp
Admin
the authorAdmin

Leave a Reply