ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟಿಸಲಿರುವ ಮೋದಿ

ಕೋಲ್ಕತಾ : ಸಾರಿಗೆ ಸಂಪರ್ಕದಲ್ಲಿ ಭಾರತದಲ್ಲಿ ಕ್ರಾಂತಿಯಾಗಿದೆ. ಅತ್ಯುತ್ತಮ ರಸ್ತೆ, ಕಾರಿಡಾರ್, ಸೇತುವೆ, ರೈಲು ಹಳಿ, ಅತ್ಯಾಧುನಿಕ ರೈಲು ಸೇರಿದಂತೆ ಹಲವು ವಿಶೇಷ ಯೋಜನೆಗಳು ಉದ್ಘಾಟನೆಗೊಂಡಿದೆ. ವಿಶ್ವದ ಅತೀ ಎತ್ತರದ ಚೆನಾಬ್ ರೈಲು ಸೇತುವೆ ಕಾಶ್ಮೀರದಲ್ಲಿ ನಿರ್ಮಾಣವಾಗಿದೆ. ಇದೀಗ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದೆ. ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಈ ಮೆಟ್ರೋಲ್ ರೈಲನ್ನು ಮಾರ್ಚ್ 6 ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಈ ರೈಲು ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳನ್ನು ಹೊಂದಿದೆ. ಒಟ್ಟು 16.6 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಕಿ 4. 8 ಕಿಲೋಮೀಟರ್ ಹೂಗ್ಲಿ ನದಿಯ ಆಳದಿಂದ ಸಾಗಲಿದೆ.

ಈ ಮೆಟ್ರೋ ರೈಲು 45 ಸೆಕೆಂಡ್‌ ಹೂಗ್ಲಿ ನದಿ ನೀರಿನ ಅಡಿಯಲ್ಲಿನ ಸುರಂಗದಲ್ಲಿ ಸಾಗಲಿದೆ. ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ತರಲಿದೆ. ಇದು ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂಡರ್‌ ವಾಟರ್‌ ಟ್ರೈನ್‌ ಯೋಜನೆ ಅತ್ಯು​ತ್ತಮ ಇಂಜಿ​ನಿ​ಯ​ರಿಂಗ್‌ಗೆ ನಿದ​ರ್ಶ​ನ​ವಾ​ಗಿದ್ದು, ಈ ರೈಲು ದೇಶದ ರೈಲ್ವೆ​ಯಲ್ಲಿನ ಅಭಿ​ವೃ​ದ್ಧಿಯ ಸಂಕೇ​ತ​ವಾ​ಗಿದೆ. ಈ ಯೋಜ​ನೆ​ಯಿಂದ ಕೋಲ್ಕತಾ ಮಂದಿ ಆರಾ​ಮ​ವಾ​ಗಿ ಪ್ರಯಾ​ಣಿ​ಸ​ಹುದು. ಇದ​ರಿಂದ ದೇಶವೇ ಹೆಮ್ಮೆ ಪಡ​ಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ರೈಲು ಕೋಲ್ಕತಾ ಮೆಟ್ರೋ ಲೈನ್‌-2ರ ಭಾಗ​ವಾ​ಗಿ​ರ​ಲಿದೆ. ಈ​ಸ್ಟ್‌ -ವೆಸ್ಟ್‌ ಮೆಟ್ರೋ ಎಂದು ಕರೆ​ಸಿ​ಕೊ​ಳ್ಳುವ ಈ ರೈಲು ಮೊದ​ಲನೆ ಹಂತದ ಯೋಜನೆಯಲ್ಲಿ ಸಾಲ್ಟ್‌ ಲೇಕ್‌ ಸೆಕ್ಟ​ರ್‌ ನಿಂದ ಸಾಲ್ಟ್‌ ಲೇಕ್‌ ಸ್ಟೇಡಿಯಂ ವರೆಗೆ , ಎರ​ಡನೇ ಹಂತ ಸಾಲ್ಟ್‌ ಲೇಕ್‌ ಸೆಕ್ಟ​ರ್‌ ನಿಂದ ಹೌರಾ ಮೈದಾ​ನದ ವರೆಗೆ ಇರ​ಲಿದೆ. ಈ ರೈಲು ಗಂಟೆಗೆ 80 ಕಿ.ಮಿ ವೇಗ​ದಲ್ಲಿ ಚಲಿ​ಸುವ ಸಾಮರ್ಥ್ಯ ಹೊಂದಿ​ದೆ. ನೀರಿ​ನೊ​ಳಗೆ ನಿರ್ಮಿ​ಸ​ಲಾ​ಗು​ತ್ತಿ​ರುವ ಸುರಂಗ 520 ಮೀಟರ್‌ ಉದ್ದ ಹಾಗೂ 30 ಮೀಟರ್‌ ಆಳ ಇರ​ಲಿದೆ. 2017ರ ಎಪ್ರಿಲ್‌ ಅಂತ್ಯಕ್ಕೆ ಆರಂಭ​ವಾಗಿರುವ ಈ ರೈಲು ಯೋಜನೆ ಇದೀಗ ಮಾರ್ಚ್ 6ರಂದು ಉದ್ಘಾಟನೆಗೊಳ್ಳುತ್ತಿದೆ.