ಬೆಳಗಾವಿ :
ಉತ್ತರ ಕರ್ನಾಟಕ ಹೆಬ್ಬಾಗಿಲು ಬೆಳಗಾವಿ ಜಿಲ್ಲೆಯಾಗಿದೆ. ಈ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಟ್ಟಿ ಕೊಳ್ಳುವುದಕ್ಕೆ ಉತ್ತರ ಕರ್ನಾಟಕ ಜನ ಬಹಳ ನಿರೀಕ್ಷೆಯಲ್ಲಿದ್ದಾರೆ. ಸರಕಾರ ಉ.ಕ ಮತ್ತು ರಾಜ್ಯದ ಜನರಿಗೆ ಸಿಹಿ ಸುದ್ದಿ ಕೊಡ್ತಾರೆ ಅಂತ ಜನ ಮತ್ತು ನಾವು ನಿರೀಕ್ಷೆಯಲ್ಲಿ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷವಾಗಿ ನಾವು ಎಲ್ಲಾ ವಿಚಾರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಬರ ಇದೆ. ರೈತರು ಬಹಳ ನಿರೀಕ್ಷೆಯಲ್ಲಿ ಇದ್ದಾರೆ. ಕಬ್ಬು ಬೆಳೆಗಾರರು ಸಿಹಿ ಸುದ್ದಿ ಸಿಗುತ್ತಾ ಅಂತ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾಕಷ್ಟು ನಿರೀಕ್ಷೆ ಇತ್ತು. ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದಿಂದ ಉತ್ತರ ಪಡೆಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ವಿಧಾನಸೌಧ ಆಗಬೇಕು ಎಂಬ ಕಲ್ಪನೆ ಯಾಕೆ ಇಟ್ಟಿದ್ರು ಅಂದ್ರೆ ಈ ಭಾಗದ ಸಮಸ್ಯೆ ಗಳಿಗೆ ಪರಿಹಾರ ಸಿಗಲಿ. ಈ ಭಾಗದ ಅಭಿವೃದ್ಧಿ ಆಗಲಿ ಎಂಬ ಉದ್ದೇಶ ಹೊಂದಿದ್ದರು ಎಂದರು.

ಪಂಚರಾಜ್ಯ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸುಳ್ಳು ಗ್ಯಾರಂಟಿಯನ್ನು ದೇಶದಲ್ಲಿ ಬಿಂಬಿಸುವ ಕೆಲಸ ಮಾಡಿತು. ಆದರೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನು ನಂಬುವ ಸ್ಥಿತಿಯಲ್ಲಿ ಜನ ಇಲ್ಲ.
ನರೇಂದ್ರ ಮೋದಿ ಎಂಬ ಗ್ಯಾರಂಟಿ ಈ ದೇಶಕ್ಕೆ ಬೇಕು ಅಂತ ಜನ ಇದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಎಂದು ತಿಳಿಸಿದರು.