ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ. 30ರಂದು ಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ 18ನೇ ಲೋಕಸಭಾ ಚುನಾವಣೆಯ ಅಧಿಕೃತ ಪ್ರಚಾರ ಆರಂಭಿಸಲಿದ್ದಾರೆ.
ರಾಮಾಯಣದ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಸ್ಪರ್ಧಿಸಿರುವ ಮೀರತ್ ಕ್ಷೇತ್ರದಿಂದ ಮೋದಿ ಅವರ ಪ್ರಚಾರ ಶುರುವಾಗಲಿದೆ. ಇತ್ತೀಚೆಗೆ ಎನ್ಡಿಎ ಸೇರಿದ್ದ ಆರ್ಎಲ್ಡಿ ಮುಖಂಡ ಜಯಂತ್ ಚೌಧರಿ ಅವರು ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.